Tuesday, April 30, 2024
spot_imgspot_img
spot_imgspot_img

ಪ್ರಿಯಕರನಿಗಾಗಿ ಪಾಕ್‌ಗೆ ತೆರಳಿದ್ದ ಅಂಜು ಭಾರತಕ್ಕೆ ವಾಪಾಸ್‌..!!

- Advertisement -G L Acharya panikkar
- Advertisement -

ಭಾರತದಿಂದ ಪ್ರೀತಿ ಅರಸಿ ಪಾಕಿಸ್ತಾನಕ್ಕೆ ತೆರಳಿ ಮದುವೆಯಾಗಿದ್ದ ಅಂಜು ಅಲಿಯಾಸ್ ಫಾತಿಮಾ (34) ಭಾರತಕ್ಕೆ ಮರಳುತ್ತಿದ್ದಾಳೆ. ಅಕ್ಟೋಬರ್ ಮೊದಲ ವಾರದಲ್ಲಿ ಅಂಜು ರಾಜಸ್ಥಾನಕ್ಕೆ ಮರಳುತ್ತಿದ್ದಾಳೆ ಎನ್ನಲಾಗಿದೆ.

ಕಳೆದ ಜುಲೈ 25ರಂದು ಅಂಜು ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೆರಳಿ ತನ್ನ 4ವರ್ಷದ ಹಿಂದೆ ಪರಿಚಯವಾಗಿದ್ದ ಗೆಳೆಯ ನಸ್ರುಲ್ಲ್​ನನ್ನು ಮದುವೆಯಾಗಿದ್ದಳು. ಇದೀಗ ಅಂಜು ತನ್ನ ಇಬ್ಬರ ಮಕ್ಕಳ ನೆನಪಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಮಕ್ಕಳನ್ನ ನೋಡಲು ಮುಂದಿನ ತಿಂಗಳು ಭಾರತಕ್ಕೆ ಮರಳುತ್ತಿದದ್ದು, ಟಿಕೆಟ್‌ ಕೂಡಾ ಬುಕ್‌ ಆಗಿದೆ ಎನ್ನಲಾಗಿದೆ.

ರಾಜಸ್ಥಾನ ಮೂಲದ ಅಂಜು, ಪಾಕಿಸ್ತಾನದಲ್ಲಿರುವ ಫೇಸ್​ಬುಕ್ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದಳು. ಪಾಕಿಸ್ತಾನಕ್ಕೆ ಹೋದ ಮೇಲೆ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನಸ್ರುಲ್ಲಾನನ್ನು ಮದುವೆ ಆಗಿದ್ದಾಳೆ. ಮಕ್ಕಳನ್ನು ಬಿಟ್ಟು ಹೋದ ಅಂಜು ವಿರುದ್ಧ ಆಕೆಯ ಗಂಡ ತೀವ್ರ ಆಕ್ರೋಶ ಕೂಡ ವ್ಯಕ್ತಪಡಿಸಿದ್ದನು.ಅಂಜುಗಾಗಿ ಪಾಕ್‌ ಸ್ಟಾರ್ ಗ್ರೂಪ್ ಆಫ್ ಕಂಪನಿ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ದುಬಾರಿ ಗಿಫ್ಟ್‌ಗಳನ್ನು ಕೊಟ್ಟಿದ್ದರು. ಪಾಕಿಸ್ತಾನದ 10 ಮೊರ್ಲಾ ಜಾಗದ ಮನೆ ಅಂದರೆ ದುಬಾರಿಯಾದ ಬಂಗಲೆಯನ್ನು ಅಂಜುಗೆ ನೀಡಿರುವ ಸಂಗತಿ ಕೂಡ ಬೆಳಕಿಗೆ ಬಂದಿತ್ತು.

ಪಾಕಿಸ್ತಾನದ PKR 50,000 ಚೆಕ್‌ ಅನ್ನು ಆಕೆ ಕೈಗೆ ಹಸ್ತಾಂತರಿಸಲಾಗಿದೆ. ಅಂಜುಳನ್ನು ಭೇಟಿಯಾಗುತ್ತಿರುವ ಪಾಕ್‌ ಉದ್ಯಮಿಯ ಸ್ನೇಹಿತರು ಅನೇಕ ಉಡುಗೊರೆಗಳ ಮಹಾಪೂರವನ್ನೇ ಹರಿಸಿದ್ದಾರೆ ಎಂಬುದನ್ನು ಕೂಡ ಮಾಧ್ಯಮಗಳು ಬಿತ್ತರಿಸಿದ್ದವು.

ಆದರೀಗ ಅಂಜು ಭಾರತಕ್ಕೆ ಬರುತ್ತಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆಕೆಗೆ ಭಾರತದಲ್ಲಿರುವ ಮಕ್ಕಳ ಭೇಟಿಗೆ ಅವಕಾಶ ಮಾಡಲಾಗುತ್ತದೆಯೇ ಎಂದು ಕಾದುನೋಡಬೇಕಿದೆ.

- Advertisement -

Related news

error: Content is protected !!