Monday, June 24, 2024
spot_imgspot_img
spot_imgspot_img

ವಿಟ್ಲ : ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇದರ ವಾರ್ಷಿಕ ಮಹಾಸಭೆ

- Advertisement -G L Acharya panikkar
- Advertisement -

ವಿಟ್ಲ : ದಿನಾಂಕ 15.06.2024 ರ ಶನಿವಾರದಂದುವಿಠಲ್ ಜೇಸಿಸ್ ಆಂಗ್ಲ ಮಾಧ್ಯಮಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇದರ ವಾರ್ಷಿಕ ಮಹಾಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಸತೀಶ್ ಆಳ್ವಾರವರು ವಹಿಸಿಕೊಂಡರು.


ಕಾರ್ಯಕ್ರಮವನ್ನು ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ಜಿಲ್ಲಾ ಆಯುಕ್ತರಾದ ಡಾ. ಮೋಹನ್ ಆಳ್ವ ರವರು ಉದ್ಘಾಟಿಸಿದರು. ಇವರು ವಿಟ್ಲ ಸ್ಥಳೀಯ ಸಂಸ್ಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಹೆಚ್ಚಿನ ವಿದ್ಯಾರ್ಥಿಗಳು ತೃತೀಯ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆ ಬರೆಯುತ್ತಿದ್ದಾರೆ ಎಂಬುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆ ಇನ್ನು ಹೆಚ್ಚಿನ ಶಾಲೆಗಳಲ್ಲಿ ಸ್ಕೌಟ್ ಗೈಡ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿ ತಿಳಿಸಿದರು.

ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾ ಪಂಚಾಯಿತಿ ನ ಮಾಜಿ ಉಪಾಧ್ಯಕ್ಷರಾದ ಎಂಎಸ್ ಮೊಹಮ್ಮದ್, ವಿಠ್ಠಲ್ ಜೇಸಿಸ್ ಶಾಲೆಯ ಉಪಾಧ್ಯಕ್ಷರಾದ ಎಲ್. ಎನ್. ಕುಡೂರು., ಜಿಲ್ಲಾ ಕಾರ್ಯದರ್ಶಿಗಳಾದ ಪ್ರತಿಮ್ ಕುಮಾರ್ ಜಿಲ್ಲಾ ಸ್ಕೌಟ್ ಆಯುಕ್ತರದ ಮೊಹಮ್ಮದ್ ತುಂಬೆ, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಜಯವಂತಿ ಸೋನ್ಸ್, ಜಿಲ್ಲಾ ಸಹಾಯಕ ಆಯುಕ್ತರಾದ ಸುನಿತಾ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಸುರೇಶ್ ಬನಾರಿ, ಗೌರವಾಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ದಂಬೆಕಾನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರತೀಪ್ 2023-24ನೇ ಸಾಲಿನ ವರದಿ ವಾಚಿಸಿದರು.

ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿಗಳಾದ ವಿಶ್ವನಾಥ್ ಗೌಡ ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿದ ಒಬ್ಬ ಸ್ಕೌಟ್ ಮತ್ತು ಒಬ್ಬ ಗೈಡ್ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು. ರಾಜ್ಯಪುರಸ್ಕಾರ ಪ್ರಾವೀಣ್ಯತಾ ಪದಕ ಪರೀಕ್ಷಕರನ್ನು ಕೂಡ ಗೌರವಿಸಲಾಯಿತು. ತೃತೀಯ ಸೋಪಾನ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆಯನ್ನು ಪೂರ್ಣಗೊಳಿಸಿದ ಒಟ್ಟು 120ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತಲೆ ಸಂಸ್ಥೆಯಲ್ಲಿ ಹೊಸದಾಗಿ ನೇಮಕರಾದ ಎ.ಡಿ.ಸಿಗಳಾದ ಶ್ರೀಯುತ ಡಾ. ಗೀತಾ ಪ್ರಕಾಶ್, ಭಾಸ್ಕರ್ ರೈ,ಸೇಸಪ್ಪ ಗೌಡ, ಮೀರಾಗೊನ್ವಲೀಸ್ ಇವರನ್ನು ಗೌರವಿಸಲಾಯಿತು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಜೆಸಿಂತಾ ಮಸ್ಕರೆನಸ್ ಎಲ್ಲರನ್ನು ಸ್ವಾಗತಿಸಿದರು. ಸಹ ಕಾರ್ಯದರ್ಶಿ ಇಸ್ಮಾಯಿಲ್ ಧನ್ಯವಾದ ಗೈದರು. ಜೊತೆ ಕಾರ್ಯದರ್ಶಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಂಸ್ಥೆಯ ಜಿಲ್ಲಾ ಪ್ರತಿನಿಧಿಗಳಾದ ನಾರಾಯಣ ನಾಯಕ್ , ಎವ್ಲಿನ್ ಹೆಲನ್, ನೀರಜಾ, ಸಹಕರಿಸಿದರು. ನೋಂದಾವಣಿಯಲ್ಲಿ ವೀಣಾ, ಭವ್ಯ ,ನಮಿತ ಸಹಕರಿಸಿದರು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಜಯರಾಮ್ ಬಳ್ಳಾಲ್ ಪದಾಧಿಕಾರಿಗಳಾದ ಸಂತೋಷ ಕುಮಾರ್, ಮಹಮದ್ ಇಕ್ಬಾಲ್, ಪುಷ್ಪ, ರಾಜೇಶ್ ವಿಟ್ಲ, ಮೋಹನ್ ಕಟ್ಟೆ,ಸದಾನಂದ ಗೌಡ ಸೇರಾಜೆ, ರಮಾನಾಥ್ ವಿಟ್ಲ, ಬಾಬು ಕೊಪ್ಪಳ, ಪದ್ಮನಾಭ ಗೌಡ ಗಿರಿಯಪ್ಪ ಗೌಡ ಕೃಷ್ಣಯ್ಯ ಅರಮನೆ ಉಪಸ್ಥಿತರಿದ್ದರು. ತರಬೇತಿಯನ್ನ ಪಡೆದಂತಹ ಸ್ಕೌಟ್ ಗೈಡ್ ಶಿಕ್ಷಕರು, ಶಾಲೆಯ ಪ್ರಾಂಶುಪಾಲರಾದ ಜಯರಾಮ್ ರೈ ಆಡಳಿತ ಅಧಿಕಾರಿ ರಾಧಾಕೃಷ್ಣ ಉಪಸ್ಥಿತರಿದ್ದರು.

- Advertisement -

Related news

error: Content is protected !!