Monday, April 29, 2024
spot_imgspot_img
spot_imgspot_img

ರೈಲು ನಿಲ್ದಾಣದಲ್ಲಿ ಅನಾಮಧೇಯ ಬಾಕ್ಸ್ ಗಳು ಪತ್ತೆ! ಬಾಂಬ್ ಸ್ಕ್ಯಾಡ್, ಶ್ವಾನದಳ ದೌಡು

- Advertisement -G L Acharya panikkar
- Advertisement -

ಶಿವಮೊಗ್ಗ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್‌ ನಲ್ಲಿ ಎರಡು ಅನಾಮಧೇಯ ಬಾಕ್ಸ್ ಗಳು ಪತ್ತೆಯಾಗಿದ್ದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

ಶನಿವಾರದಿಂದ ಎರಡು ಬಾಕ್ಸ್ ಗಳು ರೈಲು ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಕಂಡು ಬಂದಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಯಾರೂ ಹತ್ತಿರ ಹೋಗದಂತೆ ಪೊಲೀಸರು ಬ್ಯಾರಿಕೇಡ್ ಇಟ್ಟು ನಿಗಾ ವಹಿಸಿದ್ದಾರೆ.

ಎರಡು ಬಾಕ್ಸ್ ಗಳಲ್ಲಿ ಏನಿದೆ ಎಂಬುದು ಇನ್ನು ತಿಳಿದು ಬಂದಿಲ್ಲ ಆದರೆ ಬಾಕ್ಸ್ ಮೇಲೆ ಪುಡ್ ಗ್ರೆನ್ಸ್ ಅಂಡ್ ಶುಗರ್ಸ್ ಎಂದು ಬರೆದಿದ್ದು ಯಾರಿಗೆ ಸೇರಿದ್ದು ಎಂದು ಇನ್ನೂ ತಿಳಿದು ಬಂದಿಲ್ಲವಾಗಿದೆ.

ಅನಾಮಧೇಯ ಬಾಕ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದ್ದು ಅಲ್ಲದೆ ಬಾಕ್ಸ್ ಪರಿಶೀಲನೆಗೆ ಬಾಂಬ್ ಸ್ಟ್ರಾಡ್ ಹಾಗೂ ಶ್ವಾನದಳ ಸ್ಥಳಕ್ಕೆ ದೌಡಾಯಿಸಿದೆ.

- Advertisement -

Related news

error: Content is protected !!