Friday, April 19, 2024
spot_imgspot_img
spot_imgspot_img

ಕರಾವಳಿಯ ಪುತ್ತೂರಿನ ಚೆಲುವೆ ಅನುಷ್ಕಾ ಶೆಟ್ಟಿ ಕನ್ನಡಕ್ಕೆ.

- Advertisement -G L Acharya panikkar
- Advertisement -

ಕರಾವಳಿಯ ಪುತ್ತೂರಿನ ಅನುಷ್ಕಾ ಶೆಟ್ಟಿ ಅಪ್ಪಟ ಕನ್ನಡತಿಯಾಗಿರುವ ಅವರು, ಮಿಂಚಿದ್ದು ಮಾತ್ರ ತೆಲುಗು, ತಮಿಳು ಚಿತ್ರರಂಗದಲ್ಲಿ ಈಗಲೂ ಅವರಿಗೆ ಅಲ್ಲಿ ನಂಬರ್ 1 ಪಟ್ಟ ಇದೆ. ಆದರೆ, ಇಲ್ಲಿಯವರೆಗೂ ಒಂದೇ ಒಂದು ಕನ್ನಡ ಸಿನಿಮಾದಲ್ಲಿ ಅನುಷ್ಕಾ ಕಾಣಿಸಿಕೊಂಡಿಲ್ಲ. ಇದೀಗ ಇದೇ ಅನುಷ್ಕಾ ಕನ್ನಡಕ್ಕೆ ಬರುತ್ತಿದ್ದಾರೆ. ಅದೂ ‘ನಿಶ್ಯಬ್ದಂ’ ವಾಗಿ!

‘ನಿಶ್ಯಬ್ದಂ ಸಿನಿಮಾವು ಬಹುಭಾಷೆಗಳಲ್ಲಿ ನಿರ್ಮಾಣವಾಗಿದೆ. ಇದೀಗ ಆ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬರಲಿದೆ.ಸದ್ಯ ಅದರ ಕನ್ನಡ ವರ್ಷನ್‌ನ ಒಂದು ಹಾಡು ರಿಲೀಸ್ ಆಗಿದ್ದು, ‘ನಿಶ್ಯಬ್ಧಂ’ ಸಿನಿಮಾದ ಕನ್ನಡ ವರ್ಷನ್‌ ಹಾಡಿನ ಲಿಂಕ್‌ ಅನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿರುವ ಅನುಷ್ಕಾ ಶೆಟ್ಟಿ, ಕನ್ನಡದಲ್ಲೇ ಮಾಹಿತಿ ನೀಡಿದ್ದಾರೆ. ‘ನಿನ್ನೆ ನಿನ್ನೆ ಕಣ್ಣಿನಲ್ಲಿ ತುಂಬಿಕೊಂಡೇ..’ ನನ್ನ ಮೊದಲ ಕನ್ನಡ ಲಿರಿಕಲ್ ವಿಡಿಯೋ ನಿಮಗಾಗಿ ಇಲ್ಲಿದೆ..’ ಎಂದು ಬರೆದುಕೊಂಡಿದ್ದಾರೆ ಅನುಷ್ಕಾ. ಈಗ ಆ ಚಿತ್ರವು ತಮಿಳು ಮತ್ತು ಮಲಯಾಳಂ ಜತೆಗೆ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ.

ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರಲಿರುವ ಈ ಚಿತ್ರವು ಕನ್ನಡದಲ್ಲಿ ಮಾತ್ರ ‘ಅನುಷ್ಕಾಸ್‌ ನಿಶ್ಯಬ್ಧ’ ಹೆಸರಿನಲ್ಲಿ ತೆರೆಕಾಣಲಿದೆ. ಹೇಮಂತ್ ಮಧುಕರ್ ನಿರ್ದೇಶನದ ಈ ಸಿನಿಮಾದಲ್ಲಿ ಮಾಧವನ್‌, ಸುಬ್ಬರಾಜು, ಅಂಜಲಿ ಮುಂತಾದವರು ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರ ಎಲ್ಲಿ ಬಿಡುಗಡೆಯಾಗುತ್ತದೆ ಎಂದು ನಿರ್ಮಾಪಕ ಕೋನ ವೆಂಕಟ್ ಅವರೇ ಅಧಿಕೃತವಾಗಿ ಘೊಷಿಸಲಿದ್ದಾರೆ.

- Advertisement -

Related news

error: Content is protected !!