- Advertisement -
- Advertisement -
ವರ್ಷಪೂರ್ತಿ 12 ಹೊಸ ಕಾರ್ಯಕ್ರಮಗಳು




ವಿಟ್ಲ : ಇಲ್ಲಿನ ಬೊಳಂತಿಮೊಗರು ವಿನೂತನ ಯುವಕ ಮಂಡಲ (ರಿ) ಬೆಳ್ಳಿಹಬ್ಬ ಸಂಭ್ರಮಾಚರಣೆಯ ಪ್ರಥಮ ಕಾರ್ಯಾಚಟುವಟಿಕೆ “ವಿನೂತನ ಕೃಷಿ ವಿಕಾಸ” ಶ್ರಮದಾನ ಕಾರ್ಯಕ್ರಮ ಬೊಳಂತಿಮೊಗರಿನ ಪಿಎಂ ಶ್ರೀ ಶಾಲೆ ಶಾಲೆಯಲ್ಲಿ ನಡೆಯಿತು.
ಬೆಳ್ಳಿ ಹಬ್ಬದ ಅಂಗವಾಗಿ ವರ್ಷದ 12 ತಿಂಗಳು ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಶಾಲೆಯಲ್ಲಿ ಅಡಿಕೆ ತೋಟ ರಚಿಸಲು ಗುಂಡಿ ಅಗೆಯಲಾಯಿತು. ಈ ಸಂದರ್ಭದಲ್ಲಿ ನಿವೃತ ಯೋಧರು ಹಾಗೂ ಯುವಕ ಮಂಡಲದ ಪದಾಧಿಕಾರಿಗಳಾದ ಧನಂಜಯ ನಾಯ್ತೊಟ್ಟು ಹಾಗೂ ಕುಶಾಲಪ್ಪ ನಾಯ್ತೊಟ್ಟು ಸಸಿ ನೆಡುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು.
ಈ ಕಾರ್ಯಕರ್ಮದಲ್ಲಿ ಯುವಕ ಮಂಡಲದ ಬೆಳ್ಳಿ ಹಬ್ಬದ ಅದ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಯುವಕ ಮಂಡಲದ ಗೌರವಾಧ್ಯಕ್ಷರು ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು
- Advertisement -








