



ಪುತ್ತೂರು : ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಪದಾಧಿಕಾರಿಗಳಾಗಿ ಮಹಿಳಾ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಯಶೋಧ ಗೌಡ ರವರು ನಿಯುಕ್ತಿಗೊಳಿಸಿದ್ದಾರೆ.
ರಮಣಿ ಡಿ ಗಾಣಿಗ, ಚಂದ್ರಕಾಂತಿ, ಗೀತಾ ಆರ್ಯಾಪು,ಭಾರತಿ ರೈ ಕೌಡಿಚ್ಛಾರ್ ಇವರುಗಳನ್ನುಉಪಾಧ್ಯಕ್ಷರನ್ನಾಗಿ, ಆಶಾ ಪ್ರಭಾಕರ್, ತ್ರಿವೇಣಿ ಪಲ್ಲತ್ತಾರು, ಜಯಶ್ರೀ ದೇವಸ್ಯ ಇವರುಗಳನ್ನು ಕಾರ್ಯದರ್ಶಿಗಳನ್ನಾಗಿ, ಗೀತಾ ರೈ ಖಚಾಂಚಿ ಹಾಗೂ ಗೀತಾ ಕಬಕ, ಮಮತ ರೈ, ಪುಷ್ಪಲತಾ, ಮೋಹಿನಿ ಕೇಪು, ಉಷಾರೇಖಾ ರೈ, ರತ್ನಾವತಿ ಸುವರ್ಣ ಬಿ, ಜಯಂತಿ ನೆಟ್ಟಣಿಗೆ ಮುನ್ನೂರು , ಗೀತಾ ನೆಕ್ಕಿಲಾಡಿ, ಜಯ ಎ ಬನ್ನೂರು ಇವರನ್ನು ಸದಸ್ಯರನ್ನಾಗಿ ನೇಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು , ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ , ನಿಕಟಪೂರ್ವ ಗ್ರಾ.ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ , ಜಿಲ್ಲಾ ರೈತ ಮೋರ್ಛ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಬೋರ್ಕರ್ , ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ , ಬಿಜೆಪಿ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ , ನಿತೀಶ್ ಕುಮಾರ್ ಶಾಂತಿವನ , ಬಿಜೆಪಿ ಮಹಿಳಾ ಮೋರ್ಚಾ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಿತ್ರಪ್ರಸಾದ್ ರೈ ಅಂಕೋತ್ತಿಮಾರ್ , ಸಂಧ್ಯಾ ಗಣೇಶ್ ಸೇರಿದಂತೆ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು.









