Saturday, April 27, 2024
spot_imgspot_img
spot_imgspot_img

ದೀಪಾವಳಿ ಹಬ್ಬಕ್ಕೆ ಶುಭಕೋರಿದ ಯುನೈಟೆಡ್​ ಅರಬ್​ ಎಮಿರೈಟ್ಸ್​ನ ದೊರೆ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್

- Advertisement -G L Acharya panikkar
- Advertisement -

ದುಬೈ: ಯುನೈಟೆಡ್​ ಅರಬ್​ ಎಮಿರೈಟ್ಸ್​ನ ದೊರೆ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು​ ದೀಪಾವಳಿ ಹಬ್ಬಕ್ಕೆ ಶುಭಕೋರಿದ್ದಾರೆ. ಅದರಲ್ಲೂ ಅವರು ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ದೀಪಗಳ ಹಬ್ಬಕ್ಕೆ ಶುಭಕೋರಿರುವುದು ವಿಶೇಷ.

ದೀಪಗಳ ಹಬ್ಬ ದೀಪಗಳಯಂದು ನಾನು ಪ್ರಪಂಚದಾದ್ಯಂತ ಈ ಹಬ್ಬವನ್ನ ಸಂಭ್ರಮದಿಂದ ಆಚರಿಸುತ್ತಿರುವವರಿಗೆ ಅಭಿನಂದಿಸುತ್ತೇನೆ. ಜೊತೆಗೆ ಅವರಿಗೆ ಸಮೃದ್ಧಿ ಮತ್ತು ಪ್ರಗತಿ ಸಿಗಲೆಂದು ಹಾರೈಸುತ್ತೇನೆ ಎಂದು ಮೊಹಮ್ಮದ್​ ಬಿನ್​​ ಜಾಯೇದ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಾಗೇ ಯುಎಇ ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಕೂಡ ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ಯುಎಇ ಜನರ ಪರವಾಗಿ ಪ್ರಪಂಚದಾದ್ಯಂತ ದೀಪಾವಳಿ ಆಚರಿಸುವ ಪ್ರತಿಯೊಬ್ಬರಿಗೂ ಶುಭಹಾರೈಸುತ್ತೇನೆ. ಭರವಸೆಯ ಬೆಳಕು ಸದಾ ನಮ್ಮನ್ನು ಒಂದುಗೂಡಿಸಿ ಉತ್ತಮ ನಾಳೆಯತ್ತ ಮುನ್ನಡೆಸಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!