Thursday, July 23, 2026
spot_imgspot_img
spot_imgspot_img

ಲೇಹ್‌ನಲ್ಲಿ ಸೇನಾ ಹೆಲಿಕಾಪ್ಟರ್ ಪತನ – ಮೂವರು ಹಿರಿಯ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಲೇಹ್: ಭಾರತೀಯ ಸೇನಾ ಹೆಲಿಕಾಪ್ಟರ್ ಒಂದು ಲಡಾಖ್ ನ ಲೇಹ್ ಪ್ರಾಂತ್ಯದ ಟ್ಯಾಂಗೋ ಪರ್ವತ ಪ್ರದೇಶದಲ್ಲಿ ಪತನವಾಗಿದ್ದು, ಅದರಲ್ಲಿದ್ದ ಮೂವರು ಸೇನಾಧಿಕಾರಿಗಳು ಕೂದಲೆಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಚೀತಾ ಹೆಲಿಕಾಪ್ಟರ್ ನಲ್ಲಿ ಓರ್ವ ಲೆಫ್ಟಿನೆಂಟ್ ಕರ್ನಲ್ ಮತ್ತು ಇಬ್ಬರು ಮೇಜರ್ ಗಳು ಪ್ರಯಾಣಿಸುತ್ತಿದ್ದರು. ಈ ಹೆಲಿಕಾಪ್ಟರ್ ಮೇ 20ರಂದು ಅಪಘಾತಕ್ಕೀಡಾಗಿದೆ ಎಂದು ಶನಿವಾರ ಬೆಳಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಹೆಲಿಕಾಪ್ಟ‌ರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬರು ಮೇಜ‌ರ್ ಚಲಾಯಿಸುತ್ತಿದ್ದರು. 3ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸ‌ರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಸಚಿನ್ ಮೆಹ್ರಾ ಅವರೂ ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ಮೂವರು ಅಧಿಕಾರಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಹೆಲಿಕಾಪ್ಟ‌ರ್ ಪತನಗೊಂಡ ಮೇಜರ್ ಜನರಲ್ ಸಚಿನ್ ಮೆಹ್ರಾ ಅವರು ಕ್ಲಿಕ್ಕಿಸಿಕೊಂಡ ಸೆಲ್ಪಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸವಾಲಿನ ಪರ್ವತ ಶ್ರೇಣಿ ಮತ್ತು ಹಳತಾದ ಚೀತಾ ಹೆಲಿಕಾಪ್ಟರ್ ಅವಧಿಯನ್ನು ಪರಿಗಣಿಸಿ, ಈ ಅಧಿಕಾರಿಗಳು ಜೀವಾಪಾಯದಿಂದ ಪಾರಾಗಿರುವುದು ಪವಾಡಸದೃಶ ಎಂದೇ ಹೇಳಲಾಗುತ್ತಿದೆ. ಈ ಘಟನೆಯ ಕುರಿತು ಅಧಿಕೃತ ತನಿಖೆಗೆ ಆದೇಶಿಸಲಾಗಿದೆ.

ಈ ಅಪಘಾತದಿಂದ ಚೀತಾ ಹೆಲಿಕಾಪ್ಟರ್ ಗಳ ಸುರಕ್ಷತೆಯ ಬಗೆಗಿನ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 1970ರಲ್ಲಿ ಈ ಹೆಲಿಕಾಪ್ಟರ್ ಗಳನ್ನು ಸೇನೆಗೆ ಸೇರ್ಪಡೆ ಮಾಡಲಾಗಿತ್ತು.1984ರಲ್ಲಿ ಸಿಯಾಚಿನ್ ಹಿಮನದಿಯಲ್ಲಿ ಪಾಕಿಸ್ತಾನದ ಯೋಧರ ವಿರುದ್ಧ ಹೋರಾಡಲು ನಡೆದಿದ್ದ’ಆಪರೇಷನ್‌ ಮೇಘದೂತ್’ ಭಾಗವಾಗಿದ್ದ ಈ ಹೆಲಿಕಾಪ್ಟರ್ ಗಳು ಕಳೆದ ಕೆಲವು ವರ್ಷಗಳಿಂದ ವಿವಿಧ ಅಪಘಾತಗಳಿಗೆ ಗುರಿಯಾಗಿವೆ.

- Advertisement -

Related news

error: Content is protected !!