- Advertisement -
- Advertisement -



ಹಲ್ಲೆ ಹಾಗೂ ಮನೆಗೆ ಹಾನಿಗೈದು ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನ 30 ವರ್ಷಗಳ ಬಳಿಕ ಅಡೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಡೂರು ಮೂಲೆಯ ಎಂ . ಇ ಬಾದುಷಾ ( 48) ಬಂಧಿತ ಆರೋಪಿ . 1995 ರ ಏಪ್ರಿಲ್ ನಾಲ್ಕರಂದು18ನೇ ವರ್ಷವಾಗಿದ್ದ ಈತ ಅಡೂರು ಮ೦ಞಪ್ಪಾರೆಯ ಅಬೂಬಕ್ಕರ್ ಎಂಬವರ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದು , ತಡೆಯಲು ಬಂದಿದ್ದ ತಾಯಿಯನ್ನು ದೂಡಿ ಹಾಕಿದ್ದನು ಬಳಿಕ ಅಬೂಬಕ್ಕರ್ ರವರ ಮನೆಯ ಮೇಲೆ ಕಲ್ಲೆಸೆದು ಹಂಚು ಗಳನ್ನು ಹುಡಿ ಮಾಡಿದ್ದನು. ಅಡೂರು ಪೊಲೀಸರು ಪ್ರಕರಣ ದಾಖಲಿಸಿದ್ದರೂ ಈತ ತಲೆಮರೆಸಿಕೊಂಡಿದ್ದನು.ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಈತ ಪೈವಳಿಕೆ ಬಳಿಯ ಮನೆಯಲ್ಲಿರುವುದಾಗಿ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
- Advertisement -