Sunday, June 21, 2026
spot_imgspot_img
spot_imgspot_img

ಕಾಸರಗೋಡು: ಮನೆಗೆ ನುಗ್ಗಿ ಕೊಲೆ ಬೆದರಿಕೆಗೆ ಯತ್ನಿಸಿ, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಕಾಸರಗೋಡು : ಮನೆಗೆ ನುಗ್ಗಿ ಕೊಲೆ ಬೆದರಿಕೆಗೆ ಯತ್ನಿಸಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡಂಬೈಲು ಬೆಜ್ಜದ ನಿಸಾರ್ (26) ಎಂದು ಗುರುತಿಸಲಾಗಿದೆ.

ಜುಲೈ ೨ರಂದು ಬೇರಿಕೆಯ ಅಬೂಬಕ್ಕರ್ ಸಿದ್ದೀಕ್ ರವರ ಮನೆಗೆ ನುಗ್ಗಿದ ತಂಡವು ತಲವಾರು ಬೀಸಿ ಕೊಲೆ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ನಿಸಾರ್ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಮೊರೆತ್ತಣೆ ಕಜೆ ಕೋಡಿಯ ಅಸ್ಗರ್, ಮೊರತ್ತಣೆ ಬಟ್ಯಪದವಿನ ಮುಹಮ್ಮದ್ ಹುಸೈನ್ ಆರೋಪಿಗಳಾಗಿದ್ದಾರೆ.

ನಿಸಾರ್ ಕರ್ನಾಟಕಕ್ಕೆ ಪರಾರಿಯಾಗಿ ತಲೆ ಮರೆಸಿ ಕೊಂಡಿದ್ದನು. ಈತ ಊರಿಗೆ ತಲುಪಿದ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!