- Advertisement -
- Advertisement -



ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಗಂಜಿಮಠದ ಸಫ್ವಾನ್ (20), ಮಂಜೇಶ್ವರ ದ ಮುಹಮ್ಮದ್ ಶಿಹಾಬ್ (20) ಮತ್ತು ಗಂಜಿಮಠದ ಮುಹಮ್ಮದ್ ಅರ್ಫಾಝ್ (19) ಬಂಧಿತ ಆರೋಪಿಗಳು.
ಕಳೆದ ಜೂನ್ ನಾಲ್ಕರಂದು ಬೇಕೂರು ಸುಭಾಶ್ ನಗರದ ಆಯಿಷಾ ಯೂಸಫ್ ರವರ ಮನೆಯಿಂದ ಕಳವು ನಡೆದಿತ್ತು. ಐ ಫೋನ್ ಸೇರಿದಂತೆ ಹಲವು ಸಾಮಾಗ್ರಿಗಳನ್ನು ಕಳವು ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದ್ಯೋಡು ಅಡ್ಕದ ಅಶ್ರಫ್ ಅಲಿ (25) ಎಂಬಾತನನ್ನು ಬಂಧಿಸಲಾಗಿತ್ತು. ಈತನಿಂದ ಉಳಿದವರ ಬಗ್ಗೆ ಮಾಹಿತಿ ಲಭಿಸಿತ್ತು.
ಇವರು ಹಲವಾರು ಕಳವು ಪ್ರಕರಣಗಳ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ ಮಂಗಳೂರು ಅಲ್ಲದೆ ಕಾಸರಗೋಡು , ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂದು ವರದಿಯಾಗಿದೆ.
- Advertisement -








