Monday, June 15, 2026
spot_imgspot_img
spot_imgspot_img

ಬಂಟ್ವಾಳ: ಎಮ್‌.ಡಿ.ಎಮ್‌.ಎ ಮಾದಕ ವಸ್ತು ಸೇವನೆ ಮಾಡಿ, ಮಾರಾಟ ಮಾಡಲು ಯತ್ನಿಸಿ ಇಬ್ಬರು ಆರೋಪಿಗಳ ಬಂಧನ ಪ್ರಕರಣ: ಇನ್ನೋರ್ವ ಆರೋಪಿ ಪರಾರಿಯಾಗಿದ್ದ ಬಂಟ್ವಾಳ ನಿವಾಸಿ ನಝೀರ್ ಬಂಧನ

- Advertisement -
- Advertisement -

ಬಂಟ್ವಾಳ: ಎಮ್‌.ಡಿ.ಎಮ್‌.ಎ ಮಾದಕ ವಸ್ತುಗಳ ಮಾರಾಟ ಮಾಡಲು ಬೈಕಿನಲ್ಲಿ ತಿರುಗಾಡುತ್ತಿದ್ದ ವೇಳೆ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ನೇತ್ರತ್ವದ ತಂಡ ಬಂಧಿಸಿದ್ದು ಇನ್ನೋರ್ವ ಪರಾರಿಯಾಗಿರುವ ಘಟನೆ ಫೆಬ್ರವರಿ 8ರಂದು ನಡೆದಿದೆ.

ಬಂಟ್ವಾಳ ನಗರ ಠಾಣಾ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ನಂಬರ್ ಪ್ಲೇಟ್ ಇಲ್ಲದೆ ತ್ರಿಬಲ್ ರೈಡಿನಲ್ಲಿ ಬರುತ್ತಿದ್ದ ದ್ಬಿಚಕ್ರವಾಹನವೊಂದನ್ನು ತಡೆದಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ನಝೀರ್ ಎಂಬಾತ ಹಾರಿ ಪರಾರಿಯಾಗಿದ್ದನು..ಮಂಚಿ ಗ್ರಾಮದ ಅಬ್ದುಲ್ ರಹೀಜ್ ಸಹಸವಾರ ಮಂಚಿ ನಿವಾಸಿ ದಾವುದುಲ್ ಅಮೀರ್ ನನ್ನು ಪೊಲೀಸರು ಬಂಧಿಸಿದ್ದರು.

ಬಂಟ್ವಾಳ ನಿವಾಸಿ ನಝೀರ್ ಸಹಿತ ಮಂಚಿ ಗ್ರಾಮದ ಅಬ್ದುಲ್ ರಹೀಜ್ , ಮಂಚಿ ನಿವಾಸಿ ದಾವುದುಲ್ ಅಮೀರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬೈಕ್‌ ಸಹಿತ ಸುಮಾರು 4 ಸಾವಿರ ರೂ ಮೌಲ್ಯದ 4 ಗ್ರಾಂ 04 ಮಿ.ಗ್ರಾಂ ತೂಕದ MDMA ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!