Friday, March 29, 2024
spot_imgspot_img
spot_imgspot_img

ವೇಶ್ಯಾವಾಟಿಕೆ, ಜೂಜು ಸೇರಿದಂತೆ ಅಕ್ರಮ ಅಡ್ಡೆಗಳ ಮೇಲೆ ಸಿಸಿಬಿ ರೈಡ್; 218 ಮಂದಿಯ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ವೇಶ್ಯಾವಾಟಿಕೆ ದಂಧೆ, ಜೂಜು, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು 218 ಜನರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯ ವೇಳೆ 50 ಕ್ಕೂ ಅಧಿಕ ಮಹಿಳೆಯರು ಈ ಕಾರ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಸೇರಿ ವಿವಿಧ ಜೂಜು ಕೇಂದ್ರಗಳ ಮೇಲೆ ಸಿಸಿಬಿ ವಿಶೇಷ ವಿಚಕ್ಷಣ ದಳ ದಾಳಿ ನಡೆಸಿ 24.34 ಲಕ್ಷ ರೂಪಾಯಿ ಪಡಿಸಿಕೊಂಡಿದ್ದು, 167 ಮಂದಿಯನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಬ್ಯಾಟರಾಯನಪುರ, ಚಾಮರಾಜಪೇಟೆ, ಕೆಜಿ ಹಳ್ಳಿ, ಹಲಸೂರು, ಉಪ್ಪಾರಪೇಟೆ, ಬಾಣಸವಾಡಿ, ರಾಜಗೋಪಾಲನಗರ, ಯಲಹಂಕ, ವಿಲ್ಸನ್ ಗಾರ್ಡನ್, ಸದಾಶಿವನಗರ ಸೇರಿದಂತೆ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್ಡೌನ್ ಸಂದರ್ಭದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ಸಿಸಿಬಿ ಕಾರ್ಯಾಚರಣೆ ನಡೆಸಿದ್ದು, 51 ಆರೋಪಿಗಳನ್ನು ಬಂಧಿಸಲಾಗಿದೆ. 50 ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಭಾಗಿಯಾಗಿರುವುದು ಬೆಳಕಿದೆ ಬಂದಿದೆ. 1.41 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಮಾರತಹಳ್ಳಿ, ಇಂದಿರಾ ನಗರ, ಪುಟ್ಟೇನಹಳ್ಳಿ, ಸದ್ದುಗುಂಟೆ ಪಾಳ್ಯ, ಹುಳಿಮಾವು ಮೊದಲಾದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಸಾಜ್ ಪಾರ್ಲರ್, ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದಾಳಿ ಮಾಡಲಾಗಿ ಎನ್ನಲಾಗಿದೆ.

- Advertisement -

Related news

error: Content is protected !!