Friday, May 17, 2024
spot_imgspot_img
spot_imgspot_img

ಪುತ್ತೂರು: ಶನಿ ಪೂಜೆಯಲ್ಲಿ ಅವರ ಶನಿ ಬಿಡಿಸಿದ್ದೇವೆ- ಅರುಣ್ ಪುತ್ತಿಲ ವಿರುದ್ದ ಡಿ.ವಿ. ಸದಾನಂದ ಗೌಡ ವಾಗ್ದಾಳಿ

- Advertisement -G L Acharya panikkar
- Advertisement -

ಪುತ್ತೂರು ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ 130ರಲ್ಲಿ ಒಂದು ಸೀಟು ಕಡಿಮೆ ಆಗುವುದಿಲ್ಲ, ಇದರಲ್ಲಿ ಪುತ್ತೂರು ಕೂಡಾ ಸೇರಿದೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಬೆಂಗಳೂರು ಉತ್ತರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಹೇಳಿದರು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತಯಾಚನೆಗೆ ಪುತ್ತೂರಿಗೆ ಆಗಮಿಸಿದ ಡಿ.ವಿ. ಸದಾನಂದ ಪುತ್ತೂರು ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿಯ ಭದ್ರಕೋಟೆಯಲ್ಲಿ ಬಿರುಕುಂಟು ಮಾಡುವವರ ಬಲಿಯಾಗುತ್ತಾರೆ. ಪುತ್ತೂರಿನ ಜನಸಾಮಾನ್ಯರಿಗೂ ನೆಮ್ಮದಿಯಿಂದ ಓಡಾಟ ಮಾಡಲು ಕಾರಣವಾದದ್ದು ಬಿಜೆಪಿ, ಹಿಂದಿನ ಗೂಂಡಾ ರಾಜ್ಯಕ್ಕೆ ಇತಿಶ್ರೀ ಹಾಕಿದ್ದು ಬಿಜೆಪಿ ಆದರೆ ಇವತ್ತು ಮತ್ತೆ ಕಾಂಗ್ರೆಸ್ ಅದೇ ಚಿಂತನೆಯಲ್ಲಿದೆ. ಆದರೆ ಕಾಂಗ್ರೆಸ್ ನೆನಪಿನಲ್ಲಿಡಬೇಕು. ಬಿಜೆಪಿ ಶಸ್ತ್ರಾಸ್ತ್ರ ಕೆಳಗಿಡಲಿಲ್ಲ.ನಮಗೆ ಪ್ರಾಯ ಆಗಿರಬಹುದು ವಿಷಕ್ಕೆ ಪ್ರಾಯ ಆಗಿಲ್ಲ ಗೂಂಡಾ ರಾಜಕಾರಣಕ್ಕೆ ತಕ್ಕ ಉತ್ತರ ಬಿಜೆಪಿ ನೀಡಲಿದೆ. ಸಂಜೀವ ಮಠಂದೂರು ಗೆಲುವಿಗೆ ಕಾರಣವಾದ 22 ಸಾವಿರ ಮತಗಳಿಗೆ ಸೇರಿಸಿ ಬಿಜೆಪಿ ಗೆಲುವಾಗಲಿದೆ. ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಅಭೂತಪೂರ್ವವಾಗಿ ಗದ್ದು ಬರಲಿದ್ದಾರೆ, ಎಂದರು.

ಮಹಾಲಿಂಗೇಶ್ವರನ ಶಕ್ತಿಯೇ ಆಶಾಕ್ಕರವರನ್ನು ವಿಧಾನಸಭೆಗೆ ಕಳುಹಿಸುತ್ತದೆ..!
ಸುಳ್ಯದ ಕುಗ್ರಾಮ ಮಂಡೆಕೋಲುನಿಂದ ಬಂದವ ನಾನು ಇಂದು ನರೇಂದ್ರ ಮೋದಿಯ ಕ್ಯಾಬಿನೆಟ್‌ನಲ್ಲಿ ೫ ರ್‍ಯಾಂಕ್ ಹೊಂದಿದ್ದೇನೆ. ಪುತ್ತೂರಿನಿಂದ ಹೋದವರಾದ ನಳೀನ್ ಕುಮಾರ್‍ ಕಟೀಲ್, ಶೋಭಾ ಕರಂದ್ಲಾಜೆ, ಎಸ್ ಅಂಗಾರ ಉನ್ನತ ಮಟ್ಟಕ್ಕೆ ಏರಿದ್ದಾರೆ. ಇದು ಪುತ್ತೂರು ಮಹಾಲಿಂಗೇಶ್ವರನ ಶಕ್ತಿ. ಮತ್ತೆ ಆಶಾಕ್ಕನವರನ್ನು ಗೆಲ್ಲುತ್ತಾರೆ. ವಿಧಾನಸಭೆಗೆ ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ.

ಹಿನ್ನಲೆ ತಿಳಿಯದೆ ಆರೋಪ ಮಾಡುವುದು ಸರಿಯಲ್ಲ.
ಕೆಲವರು ಚಾಲೆಂಜ್ ಮಾಡ್ತಾ ಇದ್ದಾರೆ. ಸದಾನಂದ ಗೌಡರು ಪುತ್ತೂರಿಗೆ ಬರುತ್ತಾರೋ ಇಲ್ಲವೋ? ಮಿತ್ರನಿಗೆ ನೋವಾಗುತ್ತದೋ ಏನೋ? ಒಳಗಿಂದೊಳಗೆ ಪ್ರೋತ್ಸಾಹ ಕೊಡುತ್ತಾರೆ ಎಂಬು ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಸುಳ್ಳು. ನನ್ನ ಜೀವನದಲ್ಲಿ ಒಳಗಿಂದೊಳಗೆ ಅನ್ನುವ ಪದವೇ ಬಂದಿಲ್ಲ. ಮುಖ್ಯಮಂತ್ರಿ ಆಗಿದ್ದಾಗ ಅಪಸ್ವರಗಳಿಗೆ ಕಿವಿಗೊಡಲಿಲ್ಲ. ಹಿನ್ನಲೆ ತಿಳಿಯದೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಸ್ವಾರ್ಥಕ್ಕೆ ಬೆಂಬಲ ನೀಡದಿದ್ದರೆ ಕೂಡಲೇ ದೆವ್ವವಾಗಿ ಬಿಡುತ್ತಾರೆ

ಪಕ್ಷದಲ್ಲಿ ಸೀಟು ಸಿಕ್ಕಿಲ್ಲ, ನಾನು ಸ್ವಯಂ ಘೋಷಿತ ನಾಯಕ ಅಂತ ಹೇಳಿ ಪಕ್ಷ ಬಿಟ್ಟು ಹೋಗಿ ಕಾಂಗ್ರೇಸ್‌ ಹೋಗೋದು, ಹಿಂದೂ ನಾಯಕ ಅಂತ ಹೇಳಿ ನಮ್ಮ ಪಕ್ಷ ವಿರೋಧ ಮಾಡೋದು ಇದಲ್ಲ ರಾಜಕಾರಣ. ಬಿಜೆಪಿಯನ್ನು ಯಾರಿಗೂ ಏನು ಮಾಡಲಾಗುವುದಿಲ್ಲ. ಬಿಜೆಪಿಯ ಭದ್ರಕೋಟೆಯಲ್ಲಿ ಬಿರುಕು ಉಂಟು ಮಾಡುವವರೇ ಬಲಿಯಾಗುತ್ತಾರೆ ಹೊರತು ಬಿಜೆಪಿ ಯಾವತ್ತು ಬಲಿಯಾಗಲ್ಲ

ಕೆಲವರಿಗೆ ಅವರ ಜೊತೆಗಿರುವಾಗ ಮಾತ್ರ ದೇವರು ಅಂತ ಕಾಣುತ್ತಾರೆ. ಸ್ವಾರ್ಥಕ್ಕೆ ಬೆಂಬಲ ನೀಡದಿದ್ದರೆ ಕೂಡಲೇ ದೆವ್ವವಾಗಿ ಬಿಡುತ್ತಾರೆ. ಪಕ್ಷೇತರ ಅಭ್ಯರ್ಥಿ ಡಾ. ಪ್ರಸಾದ್‌ ಭಂಡಾರಿ ಮತ್ತು ಪ್ರಭಾಕರ್‌ ಭಟ್‌ ಕಲ್ಲಡ್ಕ ಅವರನ್ನು ನಡೆದಾಡುವ ದೇವರು ಅಂತ ಹೇಳುತ್ತಿದ್ದರು. ಈಗ ಅವರಿಬ್ಬರು ದೆವ್ವ ಆಗಿ ಬಿಟ್ಟಿದ್ದಾರೆ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲ ವಿರುದ್ದ ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಬೇನಾಮಿ ಆಸ್ಥಿ ಅಶೋಕ್ ಕುಮಾರ್‌ ರೈ ಅವರ ಬಳಿ ಇದ್ದರೆ ರಾಜ್ಯ, ರಾಷ್ಟ್ರ ಅದನ್ನು ಮುಟ್ಟುಗೋಲು ಹಾಕಬಹುದು.
ಅಶೋಕ್ ಕುಮಾರ್ ರೈ ಕಾಂಗ್ರೆಸ್‌ಗೆ ಹೋದರು. ಅವರನ್ನು ಸದಾನಂದ ಗೌಡ ಅವರು ತಡೆಯಬಹುದಿತ್ತು. ನಿಮ್ಮ ಎಲ್ಲಾ ಬೇನಾಮಿ ಅವರಲ್ಲಿ ಉಂಟಂತೆ ಎಂಬ ಆರೋಪಗಳಿಗೆ ಉತ್ತರಿಸಿದ ಸದಾನಂದ ಗೌಡರು ನಾನು ಸಣ್ಣ ಕಂಪೆನಿಯಲ್ಲಿ ಪಾಲುದಾರನಾಗಿರಬಹುದು. ಹೊರತು ಪಡಿಸಿ ನನ್ನ ಬೇನಾಮಿ ಆಸ್ಥಿ ಅಶೋಕ್ ಕುಮಾರ್‌ ರೈ ಅವರ ಬಳಿ ಇದ್ದರೆ ರಾಜ್ಯ, ರಾಷ್ಟ್ರ ಅದನ್ನು ಮುಟ್ಟುಗೋಲು ಹಾಕಲಬಹುದು. ಐಟಿ, ಇಡಿ ಹೋದರೆ ಸ್ವಾಗತಿಸುತ್ತೇನೆ. ಭಾರತೀಯ ಜನತಾ ಪಾರ್ಟಿಯಲ್ಲಿ ಯಾರೆಲ್ಲಾ ಎಷ್ಟು ದಿನ ಇದ್ದಾರ ಅವರಿಗೆಲ್ಲಾ ನಾನು ಆಪ್ತಮಿತ್ರ. ಪಕ್ಷ ಬಿಟ್ಟು ಹೋದವರಿಗೆ ಆಪ್ತಮಿತ್ರನೂ ಅಲ್ಲ, ಪಾಲುದಾರನೂ ಅಲ್ಲ
. ಪಕ್ಷದಲ್ಲಿದ್ದಾಗ ಮಿತ್ರ, ಕಾಂಗ್ರೆಸ್‌ಗೆ ಹೋದಾಗ ವಿಶೇಷವಾಗಿ ಶತ್ರು. ಪಕ್ಷಾಂತರ ಬೆಳವಣಿಗೆಯ ನಂತರ ಪ್ರತ್ಯಕ್ಷ ಪರೋಕ್ಷವಾಗಿ ಅಶೋಕ್ ರೈ ಅವರಿಗೆ ಸಹಾಯ ಮಾಡಿದ್ದರೆ ನಾನು ಹೇಳಿದ ಹಾಗೆ ಕೇಳಲು ಸಿ‌ದ್ಧ ಎಂದು ತಿರುಗೇಟು ನೀಡಿದರು.

ಅವರಿಗೆ ಸ್ಥಾನ ಸಿಕ್ಕಿತ್ತು. ಆದ್ರೆ ಪಕ್ಷ ತೊರೆದಿದ್ದಾರೆ, ಈಗ ದೆವ್ವದ ತರ ಕಾಣುತ್ತಾರೆ. ತಲೆ ಕೆಡಿಸುವುದರಲ್ಲಿ ನಿಸ್ಸೀಮರು. ಬರೆದಿಟ್ಟುಕೊಳ್ಳಿ ಅತ್ಯಧಿಕ ಅಂತರಗಳಿಗೆ ಗೆಲ್ಲುತ್ತೇವೆ. ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭರ್ಜರಿ ಪ್ರಚಾರಕ್ಕೆ ನೋಡಿ ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿ ಕಂಗಾಲು ಆಗಿದ್ದಾರೆ. ಇವರಿಬ್ಬರ ನಡುವೆ ಒಳಒಪ್ಪಂದ ಆಗಿದೆ. ಮುಂದಿನ ದಿನಗಳಲ್ಲಿ ಹಿಂದೆ ಸರಿದು ಬಿಜೆಪಿಯನ್ನು ಸೋಲಿಸುವ ಹುನ್ನಾರ ನಡೆಯುತ್ತಿದೆ. ಸ್ವಲ್ಪ ಮಾನ ಮರ್ಯಾದೆ ಇರಬೇಕು. ತಮ್ಮ ಸ್ವಾರ್ಥಕ್ಕಾಗಿ ತಾವು ಬೆಳೆದ ಪಕ್ಷವನ್ನು, ಯಾರು ಏನು ಅಂತ ತೋರಿಸಿಕೊಟ್ಟ ಪಕ್ಷಕ್ಕೆ ಅವಮಾನ ಮಾಡುವುದು ಸರಿಯಿಲ್ಲ.

- Advertisement -

Related news

error: Content is protected !!