ಅಮೇರಿಕಾದ ಇಂಡಿಯಾನಾ ರಾಜ್ಯದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದುಆತನ ಸ್ಥಿತಿ ಚಿಂತಾಜನಕವಾಗಿದೆ.
ಇಂಡಿಯಾನಾ ದ ವಾಲ್ಪಾರೈಸೊ ನಗರದ ಜಿಮ್ ಒಂದರಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ ಎಂಬಾತ ಭಾರತೀಯ ವಿದ್ಯಾರ್ಥಿ ತೆಲಂಗಾಣ ಮೂಲದ ವರುಣ್ (24) ಹರಿತವಾದ ಆಯುಧದಿಂದ ಇರಿದಿದ್ದಾನೆ.
ದಾಳಿ ನಡೆದ ತಕ್ಷಣ ವರುಣ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವರುಣ್ ಸ್ಥಿತು ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ದಾಳಿಯ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ದಿನ ಮಸಾಜ್ ಮಾಡಿಸಿಕೊಳ್ಳಲು ಮಸಾಜ್ ಕೋಣೆಗೆ ಹೋದಾಗ ಅಲ್ಲಿ ಅಪರಿಚಿತ ವ್ಯಕ್ತಿಯನ್ನು ನೋಡಿದೆ ನನಗೇನೋ ವಿಚಿತ್ರ ಎನಿಸಿತು , ಆ ವ್ಯಕ್ತಿಯಿಂದ ಅಪಾಯವಿದೆ ಎಂದೆನಿಸಿತು ಹಾಗಾಗಿ ಹಲ್ಲೆ ಮಾಡಿದೆ ಎಂದು ದುಷ್ಕರ್ಮಿ ಜೋರ್ಡಾನ್ ತಿಳಿಸಿದ್ದಾನೆ.
ಇನ್ನು ವರುಣ್ ಮೇಲಿನ ದಾಳಿಯಿಂದ ಭಾರತದಲ್ಲಿನ ಕುಟುಂಬ ಕಂಗಾಲಾಗಿದೆ. ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ವರುಣ್ ತಂದೆ ರಾಮಮೂರ್ತಿ ಅವರು ಸಾರಿಗೆ ಸಚಿವ ಪಿ.ಅಜಯ್ ಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಮಗನಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಒದಗಿಸುವಂತೆ ವಿನಂತಿಮಾಡಿಸಿಕೊಂಡಿದ್ದಾರೆ.