- Advertisement -





- Advertisement -
ಬೆಂಗಳೂರು: ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಹಿರಿಯ ಪೊಲೀಸ್ ಅಧಿಕಾರಿ ಬಿ ದಯಾನಂದ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಕೆಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಪ್ರತಾಪ ರೆಡ್ಡಿ ಕಾರ್ಯನಿರ್ವಾಹಣೆ ಮಾಡಿದ್ದರು. ಇದೀಗ ಅವರನ್ನು ಡಿಜಿಪಿ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತರಾಗಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಒಂದು ವರ್ಷ ಅಧಿಕಾರಾವಧಿ ಪೂರೈಸಿದ್ದಾರೆ. ಸಾಮಾನ್ಯವಾಗಿ ನಗರ ಪೊಲೀಸ್ ಆಯುಕ್ತರಾಗಿ ಒಂದು ವರ್ಷ ಪೂರೈಸಿದ ಬಳಿಕ ಬದಲಾವಣೆ ಮಾಡುವ ಅಲಿಖಿತ ನಿಯಮ ರೂಢಿಯಲ್ಲಿದೆ. ಹೀಗಾಗಿ, ಹೊಸ ಕಮಿಷನರ್ ನೇಮಕಗೊಂಡಿದ್ದಾರೆ. ಗುಪ್ತಚರ ದಳದ ಎಡಿಜಿಪಿ ಆಗಿದ್ದ ದಯಾನಂದ್ ಅವರನ್ನು ಸರಕಾರ ಕಮಿಷನರ್ ಆಗಿ ನೇಮಿಸಿದೆ. ಎಂ ಎ ಸಲೀಂ ಅವರನ್ನು ಸಿಐಡಿ ಡಿಜಿಪಿ (ಕ್ರಿಮಿನಲ್ ತನಿಖೆ), ಶರತ್ ಚಂದ್ರ – ಎಡಿಜಿಪಿ ಗುಪ್ತಚರಕ್ಕೆ ನೇಮಕ ಮಾಡಲಾಗಿದೆ.
- Advertisement -