- Advertisement -
- Advertisement -



ಇರಾನ್ ಮತ್ತು ಇಸ್ರೇಲ್ ವಾರ್ ಎಫೆಕ್ಟ್‌ನಿಂದಾಗಿ ಸಂಪೂರ್ಣವಾಗಿ ಕಮರ್ಷಿಯಲ್ ಗ್ಯಾಸ್ ಬಂದಾಗಿ, ಸಿಲಿಂಡರ್ ಸಿಗದೇ ಹೋಟೆಲ್ ಮಾಲೀಕರು ಅಕ್ಷರಶಃ ಪರದಾಡುತ್ತಿದ್ದು, ಸೌದೆ ಒಲೆ ಮೊರೆಹೋಗಿದ್ದಾರೆ.
ಗ್ಯಾಸ್ ಸಿಲಿಂಡರ್ ಬಂದ್ ಹಿನ್ನೆಲೆ ಸಂಪೂರ್ಣವಾಗಿ ಹೋಟೆಲ್ ಮಾಲೀಕರು ಸೌದೆ ಒಲೆಗಳ ಮೊರೆ ಹೋಗಿದ್ದು, ಸೌದೆ ಮೇಲೆಯೇ ಉಪಹಾರ, ಊಟ ತಯಾರಿಸುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ಸಿಗದೇ 10-15 ಕ್ವಿಂಟಾಲ್ ಸೌದೆಯನ್ನು ಹೋಟೆಲ್ ಮಾಲೀಕರು ಸ್ಟಾಕ್ ಮಾಡಿಕೊಂಡು, ಹೋಟೆಲ್ ಉದ್ಯಮ ಬಂದ್ ಮಾಡದೇ ಸೌದೆ ಬಳಸಿಕೊಂಡು ಉಪಹಾರ, ಊಟ ತಯಾರು ಮಾಡುತ್ತಿದ್ದಾರೆ.
ಗ್ಯಾಸ್ ಕಲೆಕ್ಷನ್ ಇದ್ದ ಒಲೆಗಳನ್ನು ಬಂದ್ ಮಾಡಿ, ಎಲ್ಲವೂ ಸೌದೆ ಮಯವಾಗಿದೆ. ಸೌದೆ ಬಳಸಿಕೊಂಡು ಮಾಲೀಕರು ಅಡುಗೆ ಮಾಡಿಸುತ್ತಿದ್ದು, ಗ್ಯಾಸ್ ಹೆಚ್ಚು ಖರ್ಚಾಗುವ ಉಪಹಾರಗಳನ್ನು ಬಂದ್ ಮಾಡಿದ್ದಾರೆ. ಚೈನೀಸ್ ಮೇನು, ಸೂಪ್‌ಗಳು, ದೋಸಾ ಸೇರಿದಂತೆ ಹೆಚ್ಚು ಗ್ಯಾಸ್ ಖರ್ಚಾಗುವ ಉಪಹಾರಗಳಿಗೆ ಬ್ರೇಕ್ ಹಾಕಿದ್ದಾರೆ.
- Advertisement -








