Saturday, November 2, 2024
spot_imgspot_img
spot_imgspot_img

ಅಶೋಕ 2024 ಜನಮನ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ

- Advertisement -
- Advertisement -

ಪುತ್ತೂರು : ರೈ ಎಸ್ಟೇಟ್ ಎಜ್ಯುಕೇಶನ್‌ & ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ದೀಪಾವಳಿಯ ಪ್ರಯುಕ್ತ ಅಶೋಕ ಜನಮನ 2024 ಕಾರ್ಯಕ್ರಮ ನವೆಂಬರ್ 2 ನೇ ಶನಿವಾರ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಶೋಕ ಜನಮನ 2024 ರ ಚಪ್ಪರ ಮುಹೂರ್ತವನ್ನು ಇಂದು ಶಾಸಕ ಅಶೋಕ್‌ ಕುಮಾರ್‌ ರೈ ನೆರವೇರಿಸಿದರು ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು ಹನ್ನೆರಡನೇ ವರ್ಷದ ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು, ದಾನಗಳಲ್ಲಿ ಶ್ರೇಷ್ಟ ದಾನ ವಸ್ತ್ರದಾನ ಹಾಗೂ ಅನ್ನದಾನ ಎಂದು ಹೇಳುತ್ತಾರೆ, ನಾವು ಇದನ್ನು ಹನ್ನೋಂದು ವರ್ಷದಿಂದ ನಡೆಸಿಕೊಂಡು ಬಂದಿದ್ದೇವೆ ಈಗ ಹನ್ನೆರಡನೇ ವರ್ಷದ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ, ದೀಪಾವಳಿಯ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮ ರೈ ಎಸ್ಟೇಟ್‌ ಕೋಡಿಂಬಾಡಿ ಮನೆಯಲ್ಲಿ ಆರಂಭವಾಗಿದ್ದು ಈ ಸಂದರ್ಭದಲ್ಲಿ 25 ಜನರಿಗೆ ಆರಂಭಗೊಂಡ ವಸ್ತ್ರ ವಿತರಣೆಯು ಕಳೆದ ವರ್ಷ 63500 ಜನರಿಗೆ ವಸ್ತ್ರ ವಿತರಣೆಯನ್ನು ಮಾಡಲಾಗಿದೆ. ಈ ವರ್ಷ 75000 ಜನರಿಗೆ ವಸ್ತ್ರ ವಿತರಣೆ ಹಾಗೂ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವು ಎಲ್ಲಾ ಬಂಧುಗಳು ಸೇರಿ ಮಾಡುವ ಕಾರ್ಯಕ್ರಮ ,. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕೇರಳ ಹೀಗೆ ವಿವಿಧ ಭಾಗದ ಜನರು ಭಾಗವಹಿಸುತ್ತಾರೆ ಎಂದರು

- Advertisement -

Related news

error: Content is protected !!