Monday, June 8, 2026
spot_imgspot_img
spot_imgspot_img

ವಿಟ್ಲ: (ಜ.15) ವಿಟ್ಲದ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಎಂ.ಜಿ.ಆ‌ರ್. ಕಾರ್ಪೋರೇಶನ್ ಮತ್ತು ಇಂದಿರಾ ಜನಸೇವಾ ಕೇಂದ್ರದ ಉದ್ಘಾಟನೆ

- Advertisement -
- Advertisement -

ವಿಟ್ಲ: ಎಂ.ಜಿ.ಆರ್ ಕಾರ್ಪೋರೇಶನ್ ಮತ್ತು ಇಂದಿರಾ ಜನಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಜ.15 ರಂದು ಬೆಳಿಗ್ಗೆ 10ಕ್ಕೆ ವಿಟ್ಲ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ ಮಹಮ್ಮದ್ ರಫೀಖ್ ಅಹ್ವನಿ, ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಸುನೀಲ್ ಪ್ರವೀಣ್ ಪಿಂಟೋ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತಸರ ಬಂಗಾರು ಅರಸರು ವಿಟ್ಲ ಅರಮನೆರವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ದ.ಕ. ಜಿಲ್ಲಾ ಉಸ್ತುವಾರಿಸಚಿವ ದಿನೇಶ್ ಗುಂಡೂರಾವ್, ರಾಮನಗರ ಶಾಸಕ ಇಕ್ಸಾಲ್ ಹುಸೈನ್, ಮಾಜಿ ಸಚಿವ ಬಿ. ರಮಾನಾಥ ರೈ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಯ ಅಧ್ಯಕ್ಷ ಎಸ್.ಎಮ್ ರಶೀದ್ ಹಾಜಿ, ಬೆಂಗಳೂರು ಹಲಾಲ್ ಹೌಸಿಂಗ್ ಫೈನಾನ್ಸಿಯಲ್ ಆಡೈಸರ್ & ಮ್ಯಾನೇಜಿಂಗ್ ಡೈರೆಕ್ಟರ್ ಅಹಮದ್ ಹಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಟ ಹಾಗೂ ಬಿಗ್ ಬಾಸ್ ಸೀಸನ್ 8 ವಿನ್ನರ್ ಮಂಜು ಪಾವಗಡ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪದ್ಮಶ್ರೀ ಅಮೈ ಮಹಾಲಿಂಗ ನಾಯ್, ವಿಟ್ಲ ಮುತ್ತೂರು ಗ್ರಾಮದ ಕೃಷಿಕ ಚಂದ್ರಶೇಖರರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!