Saturday, June 13, 2026
spot_imgspot_img
spot_imgspot_img

ಜೆಇಇ ಅಡ್ವಾನ್ಸ್ ಮತ್ತು ಜೆಇಇ ಮೈನ್ಸ್ ಪರೀಕ್ಷೆ-2026ರಲ್ಲಿ ಮಂಗಳೂರಿನ ಬಿ. ವಿಶ್ರುತ್ ಕೃಷ್ಣಗೆ 79ನೇ ರ‍್ಯಾಂಕ್

- Advertisement -
- Advertisement -

ಮಂಗಳೂರು: ಬಿ.ವಿಶ್ರುತ್ ಕೃಷ್ಣ ಆರ್ ಭಟ್ ಅವರು ಜೆಇಇ ಅಡ್ವಾನ್ಸ್ 2026ರಲ್ಲಿ ಆಲ್ ಇಂಡಿಯಾ(ಎಐಆರ್) 79ನೇ ಬ್ಯಾಂಕ್ ಮತ್ತು ಜೆಇಇ ಮೈನ್ಸ್ 2026ರಲ್ಲಿ ಆಲ್ ಇಂಡಿಯಾ 335ನೇ ರ‍್ಯಾಂಕ್ ಗಳಿಸಿದ್ದು, 99.98 ಪರ್ಸೆಂಟೈಲ್ ಪಡೆದಿದ್ದಾರೆ.

ರಾಜಸ್ಥಾನದ ಕೋಟ ಮಾ ಭಾರತಿ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿಶ್ರುತ್‌ಕೃಷ್ಣ ಭಟ್ ದ.ಕ., ಉಡುಪಿ ಜಿಲ್ಲೆಗೆ ಟಾಪರ್ ಅಲ್ಲದೆ ಕರ್ನಾಟಕ ರಾಜ್ಯದ ಅಗ್ರ 10 ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿದ್ದಾರೆ.

ಇವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(ಎನ್‌ಐಟಿಕೆ)ದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಬಡೆಕ್ಯಾ ರಾಮಚಂದ್ರ ಭಟ್ ಮತ್ತು ಮಂಗಳೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಸಲಹೆಗಾರ್ತಿ ಡಾ.ಪೂರ್ಣಿಮಾ ಆರ್.ಭಟ್ ದಂಪತಿಗಳ ಪುತ್ರರಾಗಿದ್ದಾರೆ.

ಜೆಇಇ ಅಡ್ವಾನ್ಸ್ ಮತ್ತು ಜೆಇಇ ಮೈನ್ಸ್ ಪರೀಕ್ಷೆ ರ‍್ಯಾಂಕ್ ಗಳಿಸಿ ಸಾಧನೆ ಮಾಡಿರುವ ಬಿ. ವಿಶ್ರುತ್ ಕೃಷ್ಣ ಅವರನ್ನು ದ.ಕ. ಜಿಲ್ಲಾ ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬೇಟಿ ನೀಡಿ ಸಿಹಿ ತಿನ್ನಿಸಿ ಮುಂದಿನ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.

- Advertisement -

Related news

error: Content is protected !!