Sunday, June 21, 2026
spot_imgspot_img
spot_imgspot_img

ಬೆಳಗಾವಿ ಅಧಿವೇಶನ ಸಮಯದಲ್ಲೇ ಬೆಳಗಾವಿಯಲ್ಲಿ ಅಮಾನುಷ ಕೃತ್ಯ;

- Advertisement -
- Advertisement -

ವೃದ್ಧೆಯನ್ನು ವಿವಸ್ತ್ರ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ; 7 ಆರೋಪಿಗಳು ಅರೆಸ್ಟ್..!

ಬೆಳಗಾವಿ ಅಧಿವೇಶನ ಸಮಯದಲ್ಲೇ ಬೆಳಗಾವಿಯಲ್ಲಿ ಅಮಾನುಷ ಕೃತ್ಯವೊಂದು ನಡೆದ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ವೃದ್ದೆಯ ಮನೆಯನ್ನು ಧ್ವಂಸ ಮಾಡಿ, ವೃದ್ದೆಯನ್ನು ಹೊರಗೆಳೆದು ವಿವಸ್ತ್ರ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ.

24 ವರ್ಷದ ರೈತ ಮತ್ತು 18 ವರ್ಷದ ಹುಡುಗಿಯ ಪ್ರೇಮ ಪ್ರಕರಣವೇ ಈ ಕೃತ್ಯಕ್ಕೆ ಕಾರಣವಾಗಿದೆ. ಪ್ರೀತಿಸಿದ ಯುವತಿ ಜೊತೆ ಮಹಿಳೆಯ ಮಗ ಮನೆಬಿಟ್ಟು ಹೋಗಿದ್ದಕ್ಕೆ ಆತನ ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ.

ಪ್ರೇಮಿಗಳು ಮನೆಬಿಟ್ಟು ಹೋಗಿ ನಾಪತ್ತೆಯಾಗಿದ್ದರು. ಯುವತಿಯ ಕುಟುಂಬಸ್ಥರು ಸುಮಾರು 15ಜನರ ತಂಡ ಬಂದು ಯುವಕನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಬಾಗಿಲು ಮುರಿದು ಒಳಗೆ ಮಲಗಿದ್ದ ಮಹಿಳೆಯ ಮೆರವಣಿಗೆ ಮಾಡಿ, ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಹೋದವರ ಮೇಲು ಹಲ್ಲೆ ನಡೆಸಿದ್ದಾರೆ.

ಈ ಪೈಕಿ 7 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ನಡೆಸಿದ್ದಾರೆ. ಜೋಡಿಗಳನ್ನು ಪತ್ತೆ ಹಚ್ಚಿ ರಕ್ಷಣೆ ಕೊಡುವಲ್ಲಿ ಪೊಲೀಸರ ಸಾಹಸ ಪಟ್ಟರು.

ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವರ ಕಾಲು ಹಿಡಿದು ವೃದ್ದೆ ಬೇಡಿಕೊಂಡರು. ವೃದ್ದೆಯನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿ ರಕ್ಷಣೆ ನೀಡಲಾಗಿದೆ.

- Advertisement -

Related news

error: Content is protected !!