



ಚಂದಳಿಕೆ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ ವಿಟ್ಲ ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಇವರ ಆಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಸಹಯೋಗದಲ್ಲಿ “ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ”ವು ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನಸಂಪರ್ಕ ಅಭಿಯಾನ “ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ”ವು ದಿನಾಂಕ : 26-10-2025ನೇ ಆದಿತ್ಯವಾರ ಬೆಳಗ್ಗೆ 9-00 ರಿಂದ ಮಧ್ಯಾಹ್ನ 1-00ರವರೆಗೆ ಮಂಗಳಾ ಮಂಟಪ ಶ್ರೀರಾಮನಗರ ಚಂದಳಿಕೆ ವಿಟ್ಲದಲ್ಲಿ ನಡೆಯಲಿದೆ.
*ನೊಂದಾವಣೆ ಸಮಯ : ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ
ಸಭಾ ಕಾರ್ಯಕ್ರಮದ ಉದ್ಘಾಟಣೆಯನ್ನು ಕೃಷ್ಣಯ್ಯ ಕೆ. ವಿಟ್ಲ ಅರಮನೆ ಇವರು ನೆರವೇರಿಸಲಿದ್ದಾರೆ. ಶಂಕರ್ ಭಟ್ ಬದನಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿಧಾನ ಸಭಾಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್ ಕೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರಕ್ಷಿತಾ ಸನತ್, ವಿಟ್ಲ ಅಂಚೆ ಪಾಲಕ ಶಿವ ಕುಮಾರಿ, ಮಾರುಕಟ್ಟೆ ಅಧಿಕಾರಿ ಅಂಚೆ ಇಲಾಖೆ ಪುತ್ತೂರು ವಿಭಾಗ ಗುರುಪ್ರಸಾದ್ ಕೆ. ಎಸ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಶಮನ್ ಜೆ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿರಿರುವರು.

ತಪಾಸಣೆಯ ವಿವರಗಳು:
*ಸಾಮಾನ್ಯ ವೈದ್ಯಕೀಯ ತಪಾಸಣೆ
*ಚರ್ಮರೋಗ ತಪಾಸಣೆ
*ಬಿ.ಪಿ. ಮಧುಮೇಹ ರಕ್ತಪರೀಕ್ಷೆ
*ಮಕ್ಕಳ ತಜ್ಞರು
*ವೈದ್ಯರು ಸೂಚಿಸಿದವರಿಗೆ ಇಸಿಜಿ ಪರೀಕ್ಷೆ
*ಎಲುಬು ಕೀಲು ರೋಗಗಳ ತಪಾಸಣೆ
*ಕಣ್ಣಿನ ತಪಾಸಣಾ ವಿಭಾಗ
*ಸ್ತ್ರೀ ರೋಗ ತಜ್ಞರು
*ಧೈರ್‍ಯಾಡ್ ರಕ್ತ ಪರೀಕ್ಷೆ
ವಿ.ಸೂ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇದರ ವತಿಯಿಂದ ಆಧಾರ್ ಕಾರ್ಡ್ ಮಾಡಿ ಕೊಡಲಾಗುವುದು. ಬೇಕಾದವರು ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ರೇಷನ್ ಕಾರ್ಡ್ ತರಬೇಕು. ಅವಶ್ಯಕತೆ ಇರುವವರಿಗೆ ಉಚಿತ ಕನ್ನಡಕ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8123783699
9945990838
9945991851








