Friday, May 3, 2024
spot_imgspot_img
spot_imgspot_img

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಜಯಿಸಿದ ಆಸ್ಟ್ರೇಲಿಯಾ

- Advertisement -G L Acharya panikkar
- Advertisement -

ಮ್ಯಾಂಚೆಸ್ಟರ್: ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ 108 ರನ್, ಹಾಗೂ ಅಲೆಕ್ಸ್ ಕ್ಯಾರಿ 106ರನ್, ಜೋಡಿ 6ನೇ ವಿಕೆಟ್‌ಗೆ ಪೇರಿಸಿದ 212 ರನ್ ಜತೆಯಾಟದ ಫಲವಾಗಿ ಆಸ್ಟ್ರೇಲಿಯಾ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿತು.

 303 ರನ್‌ಗಳ ಗುರಿ ಬೆನ್ನತ್ತಿದ್ದ ಪ್ರವಾಸಿ ತಂಡ, 73 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇನ್ನೇನು ಆರೋನ್‌ ಫಿಂಚ್‌ ಪಡೆ ಪಂದ್ಯ ಸೋಲುವುದು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಅಂಗಳದಲ್ಲಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾಡಿದ ಮ್ಯಾಜಿಕ್‌ ಪಂದ್ಯದ ದಿಕ್ಕನ್ನೇ ಬದಲಿಸಿತು. ಇದರೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ತಂಡ 3 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು.

ಅದ್ಭುತ ಬ್ಯಾಟಿಂಗ್‌ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ 90 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ 108 ರನ್‌ಗಳನ್ನು ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್‌ ನೀಡುತ್ತಿದ್ದ ಅಲೆಕ್ಸ್‌ ಕ್ಯಾರಿ 114 ಎಸೆತಗಳಲ್ಲಿ ಎರಡು ಸಿಕ್ಸರ್‌ 7 ಬೌಂಡರಿಗಳೊಂದಿಗೆ 196 ರನ್‌ಗಳನ್ನು ಗಳಿಸಿದರು.

ಇಂಗ್ಲೆಂಡ್: 7 ವಿಕೆಟ್‌ಗೆ 302 (ಬೇರ್‌ಸ್ಟೋ 112, ಬಿಲ್ಲಿಂಗ್ಸ್ 57, ವೋಕ್ಸ್ 53, ಮಿಚೆಲ್ ಸ್ಟಾರ್ಕ್ 74ಕ್ಕೆ 3, ಆಡಮ್ ಜಂಪಾ 51ಕ್ಕೆ 3, ಕಮ್ಮಿನ್ಸ್ 53ಕ್ಕೆ 1).

ಆಸ್ಟ್ರೇಲಿಯಾ: 49.4 ಓವರ್‌ಗಳಲ್ಲಿ 7 ವಿಕೆಟ್‌ಗೆ 305 (ಆಲೆಕ್ಸ್ ಕ್ಯಾರಿ 106, ಗ್ಲೆನ್ ಮ್ಯಾಕ್ಸ್‌ವೆಲ್ 108, ಕ್ರಿಸ್ ವೋಕ್ಸ್ 46ಕ್ಕೆ 2, ಜೋ ರೂಟ್ 46ಕ್ಕೆ 2).

- Advertisement -

Related news

error: Content is protected !!