Friday, June 5, 2026
spot_imgspot_img
spot_imgspot_img

ಆಕ್ಸಿಯಮ್ -4 ಮಿಷನ್‌: ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಜೂನ್‌ 11ಕ್ಕೆ ಮುಂದೂಡಿಕೆ

- Advertisement -
- Advertisement -

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಮೂವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಆಕ್ಸಿಯಮ್ -4 ಮಿಷನ್‌ನ ಉಡಾವಣೆಯನ್ನು ಜೂನ್ 11 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಹೊತ್ತುಕೊಂಡು ಹೋಗಬೇಕಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್ -9 ರಾಕೆಟ್ ಮಂಗಳವಾರ ಸಂಜೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಈ ಮೂಲಕ 3ನೇ ಬಾರಿಗೆ ಈ ಯೋಜನೆ ಮುಂದೂಡಿಕೆಯಾಗುತ್ತಿದೆ.

ಹವಾಮಾನ ವೈಪರೀತ್ಯದಿಂದಾಗಿ, ಭಾರತೀಯ ಗಗನಯಾತ್ರಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಆಕ್ಸಿಯಮ್ -4 ಮಿಷನ್‌ನ ಉಡಾವಣೆಯನ್ನು ಜೂನ್ 10 ರ ಬದಲು ಜೂನ್ 11ಕ್ಕೆ ಮುಂದೂಡಲಾಗಿದೆ. ಭಾರತೀಯ ಕಾಲಮಾನ ಸಂಜೆ 5:30ಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ವಿ ನಾರಾಯಣನ್ ಹೇಳಿದ್ದಾರೆ.

ಶುಕ್ಲಾ ಜೊತೆಗೆ ಅಮೆರಿಕದ ಪೆಗ್ಗಿ ವಿಟ್ಸನ್(ಕಮಾಂಡರ್), ಪೋಲ್ಯಾಂಡ್‌ನ ಸ್ಲಾವೋಜ್ ಉಝ್‌ನಾನ್‌ಸ್ಕಿ ವಿಸ್‌ನೀವ್‌ಸ್ಕಿ, ಹಂಗೇರಿಯ ಟೈಬೋರ್ ಕಪು ಕೂಡ ಐಎಸ್‌ಎಸ್‌ಗೆ ತೆರಳಲಿದ್ದಾರೆ. ಐಎಎಫ್ ಗ್ರೂಪ್ ಸ್ಪೆಷಲಿಸ್ಟ್ ಆಗಿರುವ ಶುಕ್ಲಾ ಅವರು ಆಹಾರ ಮತ್ತು ನ್ಯೂಟ್ರಿಷನ್ ಬಗ್ಗೆ ಪ್ರಯೋಗ ಮಾಡಲಿದ್ದಾರೆ.

1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು . ಇದೀಗ 41 ವರ್ಷಗಳ ಬಳಿಕ, ಭಾರತ ಸರ್ಕಾರ ಮತ್ತೊಬ್ಬ ಗಗನಯಾನಿಯನ್ನ ಅಂತರಿಕ್ಷಕ್ಕೆ ಕಳುಹಿಸುತ್ತಿದೆ.

- Advertisement -

Related news

error: Content is protected !!