ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಅಯೋಧ್ಯೆ: ವಿಶ್ವದಾದ್ಯಂತ ಇಂದು ರಾಮನ ಘೋಷ ವಾಕ್ಯ ಕೇಳಿಬರುತ್ತಿದೆ. ಎಂದು ಪ್ರಧಾನಿ ಮೋದಿ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ರಾಮಜನ್ಮಭೂಮಿ ಟ್ರಸ್ಟ್ ನನ್ನನ್ನು ಆಹ್ವಾನಿಸಿದ್ದು ನನ್ನ ಅದೃಷ್ಟ. ಇಂತಹ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ಕೊಟ್ಟಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಗೆ ನಾನು ಆಭಾರಿಯಾಗುತ್ತೇನೆ ಎಂದರು.
ರಾಮಮಂದಿರಕ್ಕಾಗಿ ಹಲವು ಪೀಳಿಗೆ ಅವಿರತ ಪ್ರಯತ್ನ:
ಭಾರತ ಇವತ್ತು ಭಗವಾನ್ ಭಾಸ್ಕರನ ಸನ್ನಿಧಿಯಲ್ಲಿ ಸರಯೂ ನದಿ ತೀರದಲ್ಲಿ ಸುವರ್ಣ ಅಧ್ಯಾಯ ಶುರುವಾಗಿದೆ. ರಾಮಮಂದಿರಕ್ಕಾಗಿ ಹಲವು ಪೀಳಿಗೆ ಅವಿರತ ಪ್ರಯತ್ನ ಪಟ್ಟಿವೆ. ಇವತ್ತಿನ ದಿನ ಅದೇ ಪ್ರೀತಿ ಸಂಕಲ್ಪದ ಪ್ರತೀಕವಾಗಿದೆ. ರಾಮಮಂದಿರ ಹೋರಾಟದಲ್ಲಿ ಸಂಘರ್ಷವೂ ಇತ್ತೂ, ಸಂಕಲ್ಪ, ಅರ್ಪಣೆ ಇತ್ತು. ಆ ಸಂಕಲ್ಪದಿಂದಲೇ ಇವತ್ತು ಆ ಕನಸು ನನಸಾಗಿದೆ. ಯಾವುದೇ ಕೆಲಸಕ್ಕೆ ಪ್ರೇರಣೆಗಾಗಿ ರಾಮನನ್ನು ನೋಡುತ್ತೇವೆ. ರಾಮಮಂದಿರ ನಮ್ಮ ಸಂಸ್ಕೃತಿಯ ಆಧಾರ. ಕಲಿಯುಗದಲ್ಲೂ ರಾಮನ ಕೆಲಸಗಳನ್ನು ಹನುಮಾನ್ ಮಾಡುತ್ತಾನೆ ಎಂದು ಹೇಳಿದರು.
ರಾಮಮಂದಿರ ನಮ್ಮ ಸಂಸ್ಕೃತಿಯ ಆಧುನಿಕ ಪ್ರತಿನಿಧಿ
ರಾಮಮಂದಿರ ನಮ್ಮ ಸಂಸ್ಕೃತಿಯ ಆಧುನಿಕ ಪ್ರತಿನಿಧಿ. ರಾಮಮಂದಿರ ನಮ್ಮ ರಾಷ್ಟ್ರೀಯ ಭಾವನೆಯ ಪ್ರತೀಕ. ಇದು ಮುಂದಿನ ತಲೆಮಾರಿಗೆ ಭಕ್ತಿ, ಸಂಕಲ್ಪದ ಪ್ರೇರಣೆ ನೀಡಲಿದೆ. ರಾಮಮಂದಿರ ಪೂರ್ಣಗೊಂಡ ಬಳಿಕ ಕೇವಲ ಭವ್ಯವಾಗಿರಲ್ಲ. ಬದಲಾಗಿ ಈ ಕ್ಷೇತ್ರದಲ್ಲಿ ಆರ್ಥಿಕತೆ ವ್ಯವಸ್ಥೆ ಬದಲಾಗಲಿದೆ. ಇಲ್ಲಿ ಪ್ರತಿ ಕ್ಷೇತ್ರದಲ್ಲೂ ಅವಕಾಶಗಳು ಹೆಚ್ಚಾಗಲಿವೆ.
ರಾಮಮಂದಿರ ನಿರ್ಮಾಣ ರಾಷ್ಟ್ರವನ್ನು ಒಗ್ಗೂಡಿಸುವ ಪ್ರಕ್ರಿಯೆ:
ಇಡೀ ದೇಶವೇ ಇಂದು ರೋಮಾಂಚನಗೊಂಡಿದೆ. ರಾಮಮಂದಿರ ನಿರ್ಮಾಣದ ಪುಣ್ಯ ಕಾರ್ಯ ಪ್ರಾರಂಭವಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯ ರಾಷ್ಟ್ರವನ್ನು ಒಗ್ಗೂಡಿಸುವ ಪ್ರಕ್ರಿಯೆಯಾಗಿದೆ. ಶ್ರೀರಾಮ ಸಾಮಾಜಿಕ ಸಾಮರಸ್ಯವನ್ನು ಆಧಾರಶಿಲೆಯನ್ನಾಗಿ ಮಾಡಿಕೊಂಡಿದ್ರು. ಹನುಮಾನ್, ಗುರುವಸಿಷ್ಠ, ಶಬರಿಯಿಂದ ಪ್ರೀತಿ, ವಿಶ್ವಾಸ ಸಂಪಾದಿಸಿದ್ರು. ಅವರ ಅಧ್ಬುತ ವ್ಯಕ್ತಿತ್ವ, ಸತ್ಯನಿಷ್ಠೆ , ದೃಢತೆ, ಧೈರ್ಯ ಯುಗದಿಂದ ಯುಗಕ್ಕೆ ಪ್ರೇರಣೆ ನೀಡುತ್ತಲೇ ಬಂದಿದೆ.
ಶ್ರೀರಾಮ ಎಲ್ಲರಲ್ಲೂ ಇದ್ದಾನೆ:
ಒಂದೊಂದು ಕಡೆ ಒಂದೊಂದು ಭಾಷೆಯಲ್ಲಿ ರಾಮಾಯಣವಿದೆ. ಮುಸ್ಲಿಂಮರ ಸಂಖ್ಯೆ ಹೆಚ್ಚಿರುವ ರಾಷ್ಟ್ರದಲ್ಲೂ ರಾಮಾಯಣವಿದೆ. ಇಂಡೋನೇಷಿಯಾ, ಕಾಂಬೋಡಿಯಾ, ಶ್ರೀಲಂಕಾದಲ್ಲೂ ರಾಮಾಯಣ ಕಥೆಯನ್ನು ಜಾನಕಿಹರಣ ರೀತಿಯಲ್ಲಿ ಹೇಳಲಾಗುತ್ತಿದೆ. ಇರಾನ್ ಮತ್ತು ಚೀನಾದಲ್ಲೂ ರಾಮಾಯಣದ ಪ್ರಸಂಗದ ವಿವರಣೆಯಿದೆ. ಈ ಎಲ್ಲ ದೇಶಗಳಲ್ಲೂ ರಾಮಮಂದಿರ ನಿರ್ಮಾಣದಿಂದ ಸಂತೋಷವಾಗಿರುತ್ತದೆ. ಶ್ರೀರಾಮ ಎಲ್ಲರಲ್ಲೂ ಇದ್ದಾನೆ. ಎಲ್ಲ ಕಡೆ ಇದ್ದಾನೆ. ಶ್ರೀರಾಮ ವಿವಿಧತೆಯಲ್ಲಿ ಏಕತೆ ಆಗಿದ್ದಾರೆ.