Friday, May 3, 2024
spot_imgspot_img
spot_imgspot_img

ರಾಮ ಮಂದಿರ ನಿರ್ಮಾಣದಲ್ಲಿ ಶ್ರೀಲಂಕಾದ ‘ಸೀತಾ ಎಲಿಯಾ’ ಶಿಲೆ ಬಳಕೆ

- Advertisement -G L Acharya panikkar
- Advertisement -

ಅಯೋಧ್ಯಾ: ರಾಮ ಮಂದಿರ ನಿರ್ಮಾಣಕ್ಕೆ ಶ್ರೀಲಂಕಾದಲ್ಲಿರುವ ‘ಸೀತಾ ಎಲಿಯಾ’ ಎಂಬ ಸ್ಥಳದ ಶಿಲೆಯನ್ನು ಬಳಸಲಾಗುತ್ತದೆ.

ಸೀತಾ ಮಾತೆಯನ್ನು ಅಪಹರಿಸಿದ ರಾವಣ, ಇದೇ ಸ್ಥಳದಲ್ಲಿ ಬಂಧಿಸಿಟ್ಟಿದ್ದ ಎಂಬ ಪ್ರತೀತಿ ಇದೆ. ಈ ಕಾರಣಕ್ಕಾಗಿ ರಾಮಮಂದಿರ ನಿರ್ಮಾಣದಲ್ಲಿ ಸೀತಾ ಎಲಿಯಾದ ಶಿಲೆಯನ್ನು ಬಳಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಭಾರತದಲ್ಲಿರುವ ಶ್ರೀಲಂಕಾದ ಹೈ ಕಮಿಷನರ್‌ ಮಿಲಿಂದ ಮೊರಗೋಡ ಅವರು ಈ ಶಿಲೆಯನ್ನು ಭಾರತಕ್ಕೆ ತರಲಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

‘ಅಯೋಧ್ಯೆಯ ರಾಮ ಮಂದಿರಕ್ಕಾಗಿ ಸೀತಾ ಎಲಿಯಾದಿಂದ ಶಿಲೆಯನ್ನು ನೀಡಲಾಗುವುದು. ಮಯೂರಪತಿ ಅಮ್ಮನ್ ದೇವಸ್ಥಾನದಲ್ಲಿ ಶ್ರೀಲಂಕಾದ ಹೈ ಕಮಿಷನರ್‌ ಮಿಲಿಂದ ಮೊರಗೋಡ ಅವರು ಈ ಶಿಲೆಯನ್ನು ಸ್ವೀಕರಿಸಿದರು. ಇದು ಭಾರತ ಮತ್ತು ಶ್ರೀಲಂಕಾದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ’ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್‌ ಟ್ವೀಟ್‌ ಮಾಡಿದೆ.

- Advertisement -

Related news

error: Content is protected !!