ಅನೇಕರಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಹಿಮ್ಮಡಿಯಲ್ಲಿ ಬಿರುಕು ಬಿಡುವುದು. ಹೆಣ್ಣುಮಕ್ಕಳಲ್ಲಿ ಈ ಹಿಮ್ಮಡಿ ಬಿರುಕು ಹೆಚ್ಚಾಗಿರುತ್ತದೆ. ಪಾದದ ಹಿಂದೆ ಬಿಳಿಯ ಬಣ್ಣದಲ್ಲಿ ಚರ್ಮ ಎತ್ತಿದಂತಾಗುತ್ತದೆ. ಕೆಲವರಲ್ಲಿ ಇದು ಅತಿಯಾಗಿ ಚರ್ಮ ಸುಲಿದು ರಕ್ತವೂ ಬರುತ್ತದೆ. ಅತೀವ ನೋವು, ನಡೆಯಲೂ ಕಷ್ಟವಾಗುವಂತೆ ಮಾಡುತ್ತದೆ.
ಈ ಹಿಮ್ಮಡಿಯಲ್ಲಿ ಹಾಗಾದರೆ ಯಾವೆಲ್ಲಾ ಕಾರಣಗಳಿಗೆ ಬಿರುಕು ಮೂಡುತ್ತದೆ. ಇದಕ್ಕೆ ಆಯುರ್ವೇದ ವಿಧಾನದಲ್ಲಿ ಯಾವೆಲ್ಲಾ ಪರಿಹಾರಗಳಿವೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

ಕಾಲಿಗೆ ಹೊಂದುವ ಪಾದರಕ್ಷೆಗಳನ್ನು ಧರಿಸಿ. ಕೆಲವೊಮ್ಮೆ ಹಾಕಿರುವ ಚಪ್ಪಲಿಗಳು ಕಿರಿಕಿರಿ ಉಂಟು ಮಾಡಿ ಹಿಮ್ಮಡಿಗೆ ಸರಿಯಾಗಿ ಹೊಂದಾಣಿಕೆ ಆಗದೆ ಚರ್ಮ ಬಿರುಕು ಮೂಡುವಂತೆ ಮಾಡುತ್ತದೆ. ಹೀಗಾಗಿ ನಿಮ್ಮ ಪಾದಗಳಿಗೆ ಸರಿಹೊಂದುವ ಪಾದರಕ್ಷೆಗಳನ್ನು ಧರಿಸಿ.
ಯಾವುದೇ ರೀತಿಯ ಪಾದರಕ್ಷೆಗಳನ್ನು ಧರಿಸಿದರೂ ಸಾಕ್ಸ್ ಧರಿಸುವ ಅಭ್ಯಾಸ ಒಳ್ಳೆಯದು
ಎಲ್ಲಾ ಕಾಲದಲ್ಲಿಯೂ ಶೂ ಧರಿಸುವುದು ಒಳ್ಳೆಯದು. ಇದರಿಂದ ಹಿಮ್ಮಡಿಗೆ ಧೂಳು ತಾಗುವುದನ್ನು ತಪ್ಪಿಸಬಹುದಾಗಿದೆ.
ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಹಿಮ್ಮಡಿಗೆ ಹಚ್ಚಿ ನಂತರ ಸಾಕ್ಸ್ ಹಾಕಿಕೊಳ್ಳಿ. ರಾತ್ರಿ ಮಲಗುವಾಗ ಇದನ್ನು ಮಾಡಿದರೆ ಒಳ್ಳೆಯದು.
ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಗೆ ಚಿಟಿಕೆ ಅರಿಶಿನ ಹಾಕಿ ಒಡೆದ ಹಿಮ್ಮಡಿಗೆ ಹಚ್ಚಿದರೆ ಕ್ರಮೇಣವಾಗಿ ಒಡೆದ ಹಿಮ್ಮಡಿ ಸರಿಯಾಗುತ್ತದೆ.
ವಾರದಲ್ಲಿ ಎರಡು ಅಥವಾ ಮೂರು ಬಾರಿ 10 ನಿಮಿಷ ಬಿಸಿ ನೀರಿನಲ್ಲಿ ಹಿಮ್ಮಡಿಯನ್ನು ಇಟ್ಟು ಕಲ್ಲಿನಿಂದ ಹಿಮ್ಮಡಿಯನ್ನು ಉಜ್ಜಬೇಕು. ಇದರಿಂದ ಹಿಮ್ಮಡಿಯಲ್ಲಿರುವ ಸತ್ತ ಜೀವಕೋಶಗಳು ನಾಶವಾಗುತ್ತವೆ. ಆ ಬಳಿಕ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಹಿಮ್ಮಡಿಯ ಭಾಗಕ್ಕೆ ಹಚ್ಚಿ