Friday, April 19, 2024
spot_imgspot_img
spot_imgspot_img

ಕಾರ್ಕಳ: ಲವ್ ಜಿಹಾದ್ ಜಾಲಕ್ಕೆ ಬಿದ್ದು ಹಲ್ಲೆಗೊಳಗಾದ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಸಾಂತ್ವಾನ

- Advertisement -G L Acharya panikkar
- Advertisement -

ಕಾರ್ಕಳ: ಲವ್ ಜಿಹಾದ್ ಬಲೆಗೆ ಬಿದ್ದಿದ್ದ ಹಿಂದೂ ಯುವತಿಯ ಮನೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಪರವಾಗಿ ಇಂಜಿನಿಯರಿಂಗ್ ಕ್ಷೇತ್ರದ ಪ್ರತಿನಿಧಿ ಹಾಗೂ ಕಾರ್ಕಳ ಬಿಜೆಪಿಯ ಪ್ರಮುಖರಾದ ಹರ್ಷವರ್ಧನ್ ನಿಟ್ಟೆ.

ಕಾರ್ಕಳ ಬಿಜೆಪಿಯ ಪ್ರಮುಖರಾದ ಕರುಣಾಕರ ಕೋಟ್ಯಾನ್, ರಾಕೇಶ್ ಅಮೀನ್, ಸಾಣೂರು ವಿಶ್ವಕರ್ಮ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಹಾಗೂ ಮತ್ತಿತರರು ಭೇಟಿ ನೀಡಿ ಸಂತ್ರಸ್ತೆಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು, ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ವ ರೀತಿಯ ಸಹಕಾರ ಹಾಗೂ ರಕ್ಷಣೆ ಒದಗಿಸುವ ಭರವಸೆ ನೀಡಿದರು.

ತಮ್ಮ ವಿರುದ್ಧ ಅನ್ಯಧರ್ಮಿಯರಿಂದ ನಡೆಯುತ್ತಿರುವ ಲವ್ ಜಿಹಾದ್ ನಂತಹ ಷಡ್ಯಂತ್ರವನ್ನು ಯುವತಿಯರು ಅರಿಯುವಲ್ಲಿ ಎಡವುತ್ತಿರುವುದರ ಬಗ್ಗೆ ಬೇಸರ ಹಾಗೂ ಆತಂಕವಿದೆ. ಈ ಪ್ರಕರಣದಿಂದ ಪ್ರತಿಯೊಬ್ಬ ಹಿಂದೂ ಯುವತಿ ಎಚ್ಚೆತ್ತುಕೊಳ್ಳಬೇಕು. ಈ ಪ್ರಕರಣ ಕೇವಲ ಒಬ್ಬ ಯುವತಿಗೆ ಆದ ಅನ್ಯಾಯ ಮಾತ್ರವಲ್ಲ, ಇಡೀ ಹಿಂದೂ ಸಮಾಜಕ್ಕೆ ಇದು ಎಚ್ಚರಿಕೆಯ ಸಂದೇಶ. ಹಿಂದೂಗಳು ಜಾತಿ ಬೇಧಭಾವವನ್ನು ಮರೆತು ಧರ್ಮ ಜಾಗೃತರಾಗಬೇಕು.

ಇದನ್ನೆಲ್ಲ ಮಟ್ಟಹಾಕಲು ಹಿಂದೂ ಸಮಾಜ ಒಗ್ಗಟ್ಟಿನಿಂದ ಹೋರಾಡುವ ತುರ್ತು ಅನಿವಾರ್ಯತೆ ಎದುರಾಗಿದೆ, ಹಿಂದೂಪರ ಸಂಘಟನೆಗಳು ಮತಾಂತರ, ಗೋವು ಕಳ್ಳತನ, ಲವ್ ಜಿಹಾದ್ ನಂತಹ ಧರ್ಮ ವಿರೋಧಿ ಕೃತ್ಯಗಳ ವಿರುದ್ಧ ನಿರಂತರವಾಗಿ ತೀವ್ರ ಹೋರಾಟ ನಡೆಸುತ್ತಿವೆ ಇವರ ಬೆಂಬಲಕ್ಕೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕು ಎಂದು ಹರ್ಷವರ್ಧನ್ ನಿಟ್ಟೆ ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ಸೂಕ್ತ ಸಮಯದಲ್ಲಿ ಧಾವಿಸಿ ಯುವತಿಯನ್ನು ಲವ್ ಜಿಹಾದ್ ಜಾಲದಿಂದ ರಕ್ಷಿಸಿದ ಕಾರ್ಕಳ ಬಜರಂಗದಳದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಈ ಸಂದರ್ಭದಲ್ಲಿ ಸಾಣೂರು ಪಂಚಾಯತ್ ಉಪಾಧ್ಯಕ್ಷರಾದ ಪ್ರಸಾದ್ ನಿಟ್ಟೆ, ವಿಶ್ವಕರ್ಮ ಸಂಘದ ಕಾರ್ಯದರ್ಶಿ ಶ್ರೀಧರ್ ಕೆಮ್ಮಣ್ಣು, ನಿಟ್ಟೆ ವಿಶ್ವಕರ್ಮ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್, ಅನೂಪ್, ಶ್ರೀಕಾಂತ್ ಕೆಮ್ಮಣ್ಣು, ಬಜರಂಗದಳ ಸಾಣೂರು ಘಟಕದ ಶೈಲೇಶ್, ಅಕ್ಷಯ್, ಆಶಿಕ್, ನಿತಿನ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.

driving
- Advertisement -

Related news

error: Content is protected !!