Friday, April 26, 2024
spot_imgspot_img
spot_imgspot_img

ವಿಶ್ವಹಿಂದೂ ಪರಿಷತ್ ಭಜರಂಗದಳ ಘಟಕ,ವಿಷ್ಣುಮೂರ್ತಿ ಶಾಖೆ ಮಾಣಿಲ-ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸೇವಾ ಸಪ್ತಾಹದ ಅಂಗವಾಗಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಸಮಾರಂಭ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲ ಇದರ ಆಶ್ರಯದಲ್ಲಿ (20.9.2020) ಮುರುವ ದ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು.
ಉದ್ಘಾಟನಾ ಸಮಾರಂಭವು ಮೋಹನದಾಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಹಾಗೂ ಶ್ರೀ ಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಇವರ ದಿವ್ಯ ಹಸ್ತದಿಂದ ನೆರವೇರಿತು. ಸಭಾ ಕಾರ್ಯಕ್ರಮ ಎಸ್ ನಾರಾಯಣ ಇವರ ನಿರೂಪಣೆಯೊಂದಿಗೆ ಜರುಗಿತು.


ವೇದಿಕೆಯಲ್ಲಿ ಸ್ವಾಮೀಜಿ ಹಾಗೂ ಗುರೂಜಿ ಗಳೊಂದಿಗೆ ವಿಶ್ವ ಹಿಂದೂ ಪರಿಷತ್ ವಿಷ್ಣುಮೂರ್ತಿ ಶಾಖೆ ಮಾಣಿಲ ಘಟಕದ ಅಧ್ಯಕ್ಷರಾದ ಉದಯ ನಾಯಕ್ ಪಕಳಕುಂಜ, ಬಜರಂಗದಳ ಘಟಕದ ಸಂಚಾಲಕರಾದ ಉದಯ ಶೆಟ್ಟಿ ಸಾಯ ಮುಖ್ಯ ಅತಿಥಿಗಳಾದ ಮನೋಹರ್ ಶೆಟ್ಟಿ ಪೇರಡ್ಕ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದಲ್ಲಿ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಇತ್ತೀಚಿನ ದಿನಗಳಲ್ಲಿ ಮತಾಂತರ, ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಸವಿಸ್ತಾರವಾಗಿ ತಿಳಿಯಪಡಿಸಿ ಜಾಗೃತಿ ಮೂಡಿಸಿದರು.

ಕಾಳಿಕಾಂಬ ಕ್ಷೇತ್ರ ಕುಕ್ಕಾಜೆ ಯ ಧರ್ಮದರ್ಶಿ ಗಳಾದ ಶ್ರೀಕೃಷ್ಣ ಗುರೂಜಿ ಅವರು ತಮ್ಮ ಮಾರ್ಗದರ್ಶನ ಭಾಷಣದಲ್ಲಿ ನಮ್ಮ ಗ್ರಾಮದ ಬಡವರ ಕಷ್ಟಗಳನ್ನು ಪರಿಹರಿಸಲು ಅಂತಹ ಮನೆಗಳಿಗೆ ಭೇಟಿ ಕೊಟ್ಟು ಸ್ಪಂದಿಸುವ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದರು.
ಮುಖ್ಯ ಅತಿಥಗಳಾಗಿ ಆಗಮಿಸಿದ ಪೆರುವಾಯಿ ಶಕ್ತಿ ಕೇಂದ್ರದ ಸಂಚಾಲಕರಾದ ಮನೋಹರ ಶೆಟ್ಟಿ ಪೇರಡ್ಕ ಇವರು ತಮ್ಮ ಭಾಷಣದಲ್ಲಿ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಪುಣಚ ಮಹಾಶಕ್ತಿ ಕೇಂದ್ರದ ಸಂಚಾಲಕರಾದ ಹರಿ ಪ್ರಸಾದ್ ಯಾದವ್ ಅವರು ಕಾರ್ಯಕ್ರಮಕ್ಕೆ ಭೇಟಿಕೊಟ್ಟು ನಮಗೆ ಮಾರ್ಗದರ್ಶನ ನೀಡಿದರು.
ವಿಶ್ವಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ದ ನಿಕಟಪೂರ್ವ ಸಂಚಾಲಕರಾದ ಅಕ್ಷಯ್ ರಜಪೂತ್ ಕಲ್ಲಡ್ಕ ಇವರು ಕಾರ್ಯಕ್ರಮಕ್ಕೆ ಭೇಟಿಕೊಟ್ಟು ನಮ್ಮನ್ನು ಹುರಿದುಂಬಿಸಿದರು.

ಈ ನೋಂದಣಿ ಅಭಿಯಾನದಲ್ಲಿ 219 ಮಂದಿಗೆ ಉಚಿತ ಕಾರ್ಡು ವಿತರಿಸಲಾಯಿತು. ಗ್ರಾಮೀಣ ಭಾಗವಾದ್ದರಿಂದ ನೆಟ್ವರ್ಕ್ ಹಾಗೂ ಸರ್ವರ್ ನ ಕೊರತೆಯಿಂದಾಗಿ ಸಂಜೆ ನಾಲ್ಕು ಗಂಟೆಗೆ ಮುಕ್ತಾಯ ವಾಗಬೇಕಾಗಿದ್ದ ನೋಂದಣಿ ಕಾರ್ಯಕ್ರಮ ಸಂಜೆ 7ರ ವರೆಗೆ ಮುಂದುವರಿಯಿತು.

- Advertisement -

Related news

error: Content is protected !!