Thursday, December 1, 2022
spot_imgspot_img
spot_imgspot_img

ಭಾರತೀಯ ಜನತಾ ಪಾರ್ಟಿ ವಿಟ್ಲಪಡ್ನೂರು ಇದರ ಬೂತ್ ಸಮಿತಿ ಸಭೆ

- Advertisement -G L Acharya G L Acharya
- Advertisement -

ಭಾರತೀಯ ಜನತಾ ಪಾರ್ಟಿ ವಿಟ್ಲಪಡ್ನೂರು, ಬೂತ್ ಸಂಖ್ಯೆ 214 (ಪೂರ್ಲಿಪ್ಪಾಡಿ) ಇದರ ಬೂತ್ ಸಮಿತಿ ಸಭೆಯು ಪೂರ್ಲಿಪ್ಪಾಡಿ ಪ್ರಸಾದ್ ಪಿ.ಆರ್. ಇವರ ಮನೆಯಲ್ಲಿ ಜರುಗಿತು.

ಮಂಡಲ ಪ್ರಧಾನ ಕಾರ್ಯದರ್ಶಿಗಳೂ, ವಿಟ್ಲ ಪಡ್ನೂರು ಗ್ರಾಮ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷರೂ ಆದ ರವೀಶ್ ಶೆಟ್ಟಿ ಕರ್ಕಳ ಹಾಗು ಮಂಡಲ ಉಪಾಧ್ಯಕ್ಷರು, ವಿಟ್ಲಪಡ್ನೂರು ಗ್ರಾಮದ ಚುನಾವಣಾ ಪ್ರಭಾರಿಗಳು ಆದ ಜಯರಾಮ್ ನಾಯ್ಕ್ ಕುಂಟ್ರಕಲ ಇವರು ಸಭೆಯನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಧರ್ಮಾವತಿ ದೇವರಮನೆ, ಪಂಚಾಯತ್ ಮಾಜಿ ಸದಸ್ಯರಾದ ರಾಧಾಕೃಷ್ಣ ಪಲಯಮಾರ್, ನಾಗೇಶ್ ಶೆಟ್ಟಿ ಕೊಡಂಗಾಯಿ ವೇದಿಕೆಯಲ್ಲಿದ್ದರು. ಪಕ್ಷದ ಅನೇಕ ಕಾರ್ಯರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ನಿಕಟಪೂರ್ವ ಸದಸ್ಯರಾದ ಜಯಂತ್ ಪೂರ್ಲಿಪ್ಪಾಡಿ ಸ್ವಾಗತಗೈಯ್ಯುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಧರ್ಮಾವತಿ ದೇವರಮನೆ ಧನ್ಯವಾದಗೈದರು.ಈ ಸಮಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಪ್ರಾತಃಸ್ಮರಣೀಯರಾದ ಶ್ರದ್ಧೆಯ ಪಂಡಿತ ದೀನ ದಯಾಳ್ ಜೀಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

- Advertisement -

Related news

error: Content is protected !!