Saturday, April 27, 2024
spot_imgspot_img
spot_imgspot_img

ಪ್ರವಾದಿ ಚರ್ಯೆ ದೈನಂದಿನ ಜೀವನದಲ್ಲಿ ಅಳವಡಿಕೆಯಾಗಲಿ- ಅಶ್ರಫ್ ಫೈಝಿ ಮಿತ್ತಬೈಲು

- Advertisement -G L Acharya panikkar
- Advertisement -

ಬಿ.ಸಿ.ರೋಡ್(ಅ.26): ಪ್ರವಾದಿ ಚರ್ಯೆಯನ್ನು ದಿನನಿತ್ಯ ರೂಢಿಗೊಳಿಸಿ ಜೀವನ ಪಾವನಗೊಳಿಸಬೇಕು ಎಂದು ರಾಜ್ಯ ಫೈಝೀಸ್ ಪ್ರಧಾನ ಕಾರ್ಯದರ್ಶಿ ಮಿತ್ತಬೈಲು ಕೇಂದ್ರ ಮಸೀದಿ ಖತೀಬರಾದ ಅಶ್ರಫ್ ಫೈಝಿ ಕರೆ ನೀಡಿದರು.

ರಾಜ್ಯ ಫೈಝೀಸ್ ವತಿಯಿಂದ ರಾಜ್ಯಾದ್ಯಂತ ನಡಯುತ್ತಿರುವ ರಬೀಹ್ ಕ್ಯಾಂಪೈನ್-20 ರ ಅಂಗವಾಗಿ ಸಜಿಪ ಕೇಂದ್ರ ಮಸೀದಿಯಲ್ಲಿ ನಡೆದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದ ಅವರು ಪ್ರತಿಯೊಬ್ಬ ಮುಸಲ್ಮಾನನು ಪ್ರವಾದಿಯವರು ಕಲಿಸಿದ ಶಿಷ್ಟಾಚಾರಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದ ಮಧ್ಯೆ ಶಾಂತಿ ಸಹೋದರತೆಯನ್ನು ಕಾಪಾಡುವುದು ಅನಿವಾರ್ಯವಾಗಿದೆ. ಜೀವನದಲ್ಲಿ ನೆಮ್ಮದಿ ಹಾಗೂ ಸಂತಸ ಲಭಿಸಬೇಕಾದರೆ ಪ್ರವಾದಿ ಸುನ್ನತ್ ಹಿಂಬಾಲಿಸುವುದೇ ಪರಿಹಾರವಾಗಿದೆ ಎಂದರು.

ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಾಜ್ಯ ಫೈಝೀಸ್ ಹಮ್ಮಿಗೊಂಡ ಕಾರ್ಯಕ್ರಮ ಶ್ಲಾಘನೀಯವಾಗಿದ್ದು ಸಮೂಹದ ಸ್ಪಂದನ ಹಾಗೂ ಪ್ರೋತ್ಸಾಹ ಲಭಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಸಜಿಪ ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ವಹಿಸಿದ್ದರು.
ಸಮಾರಂಭದಲ್ಲಿ ಲತೀಫ್ ಮುಸ್ಲಿಯಾರ್, ಎಸ್.ಕೆ.ಮುಹಮ್ಮದ್, ಆಸಿಫ್ ಕುನಿಲ್, ಕರೀಂ ಹಾಜಿ, ಹಂಝ ದಾರಿಮಿ, ಅಬೂಬಕ್ಕರ್ ಫೈಝಿ ಬೈಲುಗುತ್ತು ಮೊದಲಾದವರು ಉಪಸ್ಥಿತರಿದ್ದರು.


ಸಜಿಪ ರೇಂಜ್ ಅಧ್ಯಕ್ಷರಾದ ಫಳುಲುದ್ದೀನ್ ಮುಸ್ಲಿಯಾರ್ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು ಮತ್ತು ವಂದಿಸಿದರು.

- Advertisement -

Related news

error: Content is protected !!