Saturday, May 18, 2024
spot_imgspot_img
spot_imgspot_img

ಬಾಬ್ರಿ ಮಸೀದಿ ಧ್ವಂಸ, ಗೋದ್ರಾ ಹತ್ಯಾಕಾಂಡ ಕೇಸ್; ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

- Advertisement -G L Acharya panikkar
- Advertisement -
astr

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಹಾಗೂ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳನ್ನು ರದ್ದುಮಾಡಿ ಸುಪ್ರೀಂ ಕೋರ್ಟ್ ಆದೇಶಹೊರಡಿಸಿದೆ.

ಬಾಬ್ರಿ ಮಸೀದಿ ಧ್ವಂಸ ಕುರಿತು ನ್ಯಾಯಾಂಗ ನಿಂದನೆಯ ಎಲ್ಲಾ ಕೇಸ್ ಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 1991ರಲ್ಲಿ ಬಾಬ್ರಿ ಮಸೀದಿ ಉರುಳಿಸದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು . ಆದರೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಬಾಬ್ರಿ ಮಸೀದಿ ಧ್ವಂಸಗೊಳಿಸಲಾಗಿತ್ತು.

ಇದು ನ್ಯಾಯಾಂಗ ನಿಂದನೆ ಎಂದು ಮೊಹಮ್ಮದ್ ಅಸ್ಲಾಂ ಎಂಬುವವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ 2010ರಲ್ಲಿಯೇ ಅರ್ಜಿದಾರರು ಮೃತಪಟ್ಟಿದ್ದರು. ಬಾಬ್ರಿ ಮಸೀದಿ ಜಮೀನು ವಿವಾದ ಕುರಿತು ಸುಪ್ರೀಂ ಕೋರ್ಟ್ 2019ರಲ್ಲಿ ತಿರ್ಪು ಪ್ರಕಟಿಸಿತ್ತು .

ಸದ್ಯಕ್ಕೆ ಬಾಬ್ರಿ ಮಸೀದಿ ಧ್ವಂಸ ಹಾಗೂ ಗೋದ್ರಾ ಹತ್ಯೆ ಪ್ರಕರಣದ ಕೇಸ್ ಗಳು ನಿರುಪಯುಕ್ತ. ವಿಶೇಷ ತನಿಖಾ ತಂಡ ಮೊಕದ್ದಮೆಹೂಡಿರುವ 9 ಪ್ರಕರಣಗಳಲ್ಲಿ 8 ಪ್ರಕರಣಗಳ ವಿಚಾರಣೆ ಮುಗಿದುಹೋಗಿದ್ದು , ಪ್ರಕರಣಗಳು ಸಮಯ ಕಳೆದಂತೆ ನಿರುಪಯುಕ್ತವಾಗಿವೆ. ಒಂದು ಪ್ರಕರಣದ ವಿಚಾರಣೆ ಮಾತ್ರ ನರೋದಾ ಗಾಂವ್ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಹೀಗಾಗಿ 8 ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

- Advertisement -

Related news

error: Content is protected !!