Sunday, September 6, 2026
spot_imgspot_img
spot_imgspot_img

ಅಪ್ರಾಪ್ತ ವಯಸ್ಸಿನ ಬಾಲಕಿ ಮಗುವಿಗೆ ಜನ್ಮ ; ಮಗು ಮೃತ್ಯು

- Advertisement -
- Advertisement -

ಸುಬ್ರಹ್ಮಣ್ಯ: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಮಗುವಿಗೆ ಜನ್ಮ ನೀಡಿದ ಹಾಗೂ ಮಗು ದಿನದ ಬಳಿಕ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಸಂಬಂಧಿಕನೇ ಗರ್ಭವತಿ ಮಾಡಿದ್ದ ಪ್ರಕರಣ ಇದಾಗಿತ್ತು. ಬಾಲಕಿ ಸಂಬಂಧಿಕರ ಮನೆಗೆ ಬಂದಿದ್ದಾಗ ಸಂಬಂಧಿಕ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪರಿಣಾಮ ಆಕೆ ಗರ್ಭವತಿಯಾಗಿದ್ದಳು.

ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿ ಯುವಕನ ಮೇಲೆ ಪೋಕ್ಸ ಪ್ರಕರಣ ದಾಖಲಾಗಿತ್ತಲ್ಲದೇ ಆರೋಪಿಯನ್ನು ಬಂಧಿಸಲಾಗಿತ್ತು.ಗರ್ಭವತಿಯಾಗಿದ್ದ ಬಾಲಕಿ ಸೋಮವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದು, ಮಂಗಳವಾರ ರಾತ್ರಿ ಮಗು ಮೃತಪಟ್ಟಿದೆ.ಸಮಯಕ್ಕೆ ಮೊದಲೇ ಮಗು ಜನನವಾಗಿದ್ದರಿಂದಲೇ ಹಾಗೂ ಮಗು ತಿಂಗಳಿಗೆ ತಕ್ಕಂತೆ ತೂಕ ಇಲ್ಲದೇ ಇರುವುದಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!