Tuesday, May 14, 2024
spot_imgspot_img
spot_imgspot_img

ಪುಟ್ಟ ಮಗುವಿನ ಶಸ್ತ್ರಚಿಕಿತ್ಸೆಗಾಗಿ ಎಮ್ ಎನ್ ಜಿ ಫೌಂಡೇಶನ್ ಜೊತೆ ಕೈಜೋಡಿಸಿದ ದಾನಿಗಳು.

- Advertisement -G L Acharya panikkar
- Advertisement -

ಮಂಗಳೂರು: ಕಲ್ಲಾಪು ಪರಿಸರದ ಎಂಟು ತಿಂಗಳ ಅನೀಸ್ ಎಂಬ ಪುಟ್ಟ ಮಗು ಕರುಳು ಸಂಬಂದಿ ರೋಗಕ್ಕೆ ತುತ್ತಾಗಿ ತುರ್ತು ಶಸ್ತ್ರಚಿಕಿತ್ಸೆಗೊಳಪಡಿಸಬೇಕಾದ ಅವಶ್ಯಕತೆಯ ಬಗ್ಗೆ ಬೆಂಗಳೂರು ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯರು ಸೂಚಿಸಿದ್ದರು.


ಮಗುವಿನ ಶಸ್ತ್ರಚಿಕಿತ್ಸೆ, ಮಗುವಿನ ತಾಯಿಯ ಕರುಳು ಜೋಡಿಸುವ ಶಸ್ತ್ರಚಿಕಿತ್ಸೆ, ಮತ್ತು ಮುಂದಿನ ಆಸ್ಪತ್ರೆ ಖರ್ಚು ವೆಚ್ಚಗಳು ಒಟ್ಟು ಸರಿಸುಮಾರು ಮೂವತ್ತು ಲಕ್ಷದಷ್ಟು ಅಂದಾಜು ಹಾಕಲಾಗಿತ್ತು.
ದಿನಕೂಲಿ ಕೆಲಸ ಮಾಡುತ್ತಾ ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿರುವ ಮಗುವಿನ ಕುಟುಂಬ ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ದಿಕ್ಕು ತೋಚದೆ ಈ ಬಗ್ಗೆ ಮಂಗಳೂರಿನ ಎಮ್ ಎನ್ ಜಿ ಫೌಂಡೇಶನ್* ಸಂಸ್ಥೆಯನ್ನು ಸಂಪರ್ಕಿಸಿತ್ತು, ಇದರ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯ ತಂಡವು ಸಂಪೂರ್ಣ ಮಾಹಿತಿ ಪಡೆದುಕೊಂಡು ಸಾಮಾಜಿಕ ‌ಜಾಲತಾಣದ ಮೂಲಕ ದಾನಿಗಳ ಸಹಾಯವನ್ನು ಯಾಚಿಸಿತ್ತು.


ಹಾಗೂ ಇದಕ್ಕಾಗಿ ಸಂಸ್ಥೆಯ ಜೊತೆ ವಿವಿಧ ಸಂಘ ಸಂಸ್ಥೆಗಳು, ವಿವಿಧ ಭಾಗದ ಸಮಾಜಸೇವಕರುಗಳು, ದೇಶವಿದೇಶಗಳಲ್ಲಿ ನೆಲೆಸಿರುವ ದಾನಿಗಳು ಜಾತಿ-ಮತ ಭೇದವಿಲ್ಲದೆ ಒಟ್ಡಾಗಿ ಕೈಜೋಡಿಸಿ ತ್ವರಿತವಾಗಿ ಸ್ಪಂದಿಸಿದರ ಪರಿಣಾಮ ಕೇವಲ ಎಂಟೇ ದಿವಸಗಳಲ್ಲಿ ಇಂದಿಗೆ ಬರೋಬ್ಬರಿ ಒಟ್ಟು 31,78,672.00 ಮೂವತ್ತೊಂದು ಲಕ್ಷದ ಇಪ್ಪತ್ತೆಂಟು ಸಾವಿರದ ಆರುನೂರ ಇಪ್ಪತ್ತೆರಡು ರೂಪಾಯಿಗಳಷ್ಟು ಮೊತ್ತವು ಆ ಪುಟ್ಟ ಮಗುವಿನ ತಾಯಿಯ ಬ್ಯಾಂಕ್ ಖಾತೆಗೆ ಜಮೆಯಾಗಿರುತ್ತದೆ.ಹಾಗೂ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಮುಂದೆ ಯಾರೂ ಕೂಡ ಆ ಖಾತೆಗೆ ಹಣ ವರ್ಗಾವಣೆ ಮಾಡಬಾರದಾಗಿ ವಿನಂತಿ ಮಾಡಿದ್ದಾರೆ.

- Advertisement -

Related news

error: Content is protected !!