


ಮಾಣಿ : ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ ಸೂರಿಕುಮೇರು ಇದರ ಸ್ವಲಾತ್ ವಾರ್ಷಿಕ ಮತ್ತು ಮತ ಪ್ರಭಾಷಣ ಕಾರ್ಯಕ್ರಮವು ಎಪ್ರಿಲ್ 19,20 ಶನಿವಾರ ಮತ್ತು ಆದಿತ್ಯವಾರ ನಡೆಯಿತು. ಪ್ರಮುಖ ವಾಗ್ಮಿಗಳಾದ ರಫೀಕ್ ಸಅದಿ ದೇಲಂಪಾಡಿ ಮತ್ತು ಹನೀಫ್ ನಿಝಾಮಿ ಮೊಗ್ರಾಲ್ ರವರು ಇಸ್ಲಾಂ ಧರ್ಮದಲ್ಲಿ ನೂತನವಾದಿಗಳು ಮತ್ತು ಪರಂಪರಾಗತ ಇಸ್ಲಾಂ ಧರ್ಮ ಎಂಬ ವಿಷಯಗಳನ್ನು ಮುಂದಿಟ್ಟು ಮಾತಾಡಿ ಹೊಸ ಹೊಸ ವಾದಗಳೊಂದಿಗೆ ಸಾಮಾನ್ಯ ಜನರ ಬ್ರೈನ್ ವಾಶ್ ಮಾಡಿ ಈಮಾನ್ ಕಬಳಿಸುವ ನೂತನವಾದಿಗಳ ಸರ್ವ ವಾದಗಳಿಗೆ ಪುರಾವೆಗಳೊಂದಿಗೆ ವಿವರ ನೀಡಿದರು.

ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ನೂತನವಾದಿಗಳೊಂದಿಗೆ ಸೇರಿ ದೀನ್ ವಿಕೃತ ಗೊಳಿಸುವ ಅಪಾಯದ ಬಗ್ಗೆ ಪ್ರಭಾಷಣ ನಡೆಸಿದ ಬಳಿಕ ದುಆ ನೆರವೇರಿಸಿಕೊಟ್ಟರು,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಶುಭಹಾರೈಸಿದರು,ಕಾರ್ಯಕ್ರಮದಲ್ಲಿ ಖತೀಬ್ ಹಸೈನಾರ್ ಸಅದಿ ಬದಿಯಡ್ಕ, ಸದರ್ ಮುಅಲ್ಲಿಂ ನಾಸಿರ್ ಸಅದಿ ನೇರಳಕಟ್ಟೆ, ಅಧ್ಯಾಪಕ ಹನೀಫ್ ಸಅದಿ ಸೆರ್ಕಳ,ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ,ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್,ಕೋಶಾಧಿಕಾರಿ ಯೂಸುಫ್ ಹಾಜಿ,ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್,ಮುಹಮ್ಮದಾಲಿ ಮುಸ್ಲಿಯಾರ್,ಮುಸ್ತಫಾ ಸಅದಿ ಸೂರಿಕುಮೇರು ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು,ಮದ್ರಸಾ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಿತು,
