Friday, April 19, 2024
spot_imgspot_img
spot_imgspot_img

ಬಂಟ್ವಾಳ: ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ; ಎರಡು ಬೋಟ್ ಹಾಗೂ ಟಿಪ್ಪರ್ ವಶಕ್ಕೆ

- Advertisement -G L Acharya panikkar
- Advertisement -

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಮರಳು ಅಡ್ಡೆ ಮೇಲೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ನಿನ್ನೆ ಮಧ್ಯರಾತ್ರಿ ದಾಳಿ ನಡೆದಿದೆ. ಈ ವೇಳೆ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ಆರೋಪದಲ್ಲಿ ಎರಡು ಬೋಟ್ ಮತ್ತು ಟಿಪ್ಪರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ತಿಳಿಸಿದ್ದಾರೆ.

ನಿನ್ನೆ ಮಧ್ಯರಾತ್ರಿ ಸುಮಾರು 12.30ರ ಬಳಿಕ ಈ ಕಾರ್ಯಾಚರಣೆಯನ್ನು ಕಂದಾಯ ಇಲಾಖೆಯ ತಂಡ, ಅರಣ್ಯ ಇಲಾಖೆ ಮತ್ತು ನಗರ ಠಾಣೆ ಪೊಲೀಸರ ಸಹಯೋಗದೊಂದಿಗೆ ನಡೆಸಿದ್ದು, ದಾಳಿ ವೇಳೆ ಇಬ್ಬರು ಪರಾರಿಯಾಗಿದ್ದಾರೆ.

ಪಾಣೆಮಂಗಳೂರು ಹಳೇ ಸೇತುವೆಯ ಅನತಿ ದೂರದಲ್ಲೇ ಸರ್ಕಾರಿ ಜಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಕುರಿತು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ.

7

ದಾಳಿ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಜೊತೆ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಕಂದಾಯ ಇಲಾಖೆಯ ವಿಎ ಗಳಾದ ಜನಾರ್ದನ, ಧರ್ಮ, ನಾಗರಾಜ್, ಚಾಲಕ ಶಿವಪ್ರಸಾದ್, ಬಂಟ್ವಾಳ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಪ್ರೀತಂ, ಜಿತೇಶ್ ಸಿಬ್ಬಂದಿ ಬಸವ, ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Related news

error: Content is protected !!