- Advertisement -
- Advertisement -
ಬಜ್ಪೆ: ದನದ ಮಾಂಸ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬಡಗ ಎಡಪದವು ಎಂಬಲ್ಲಿ ನಡದಿದೆ.
ಬಂಧಿತ ಆರೋಪಿಗಳನ್ನು ಮೂಡುಬಿದಿರೆಯ ಹಂಡೇಲು ನಿವಾಸಿ ಮೊಹಮ್ಮದ್ ಆರೀಫ್ (24) ಮೊಹಮ್ಮದ್ ಸುಲ್ತಾನ್ (19) ಎಂದು ಗುರುತಿಸಲಾಗಿದೆ.
ಬಜಪೆ ಠಾಣೆಯ ಪಿಎಸ್‌ಐ ರೇವಣಸಿದ್ದಪ್ಪ ಅವರು ಸಿಬ್ಬಂದಿ ಜೊತೆಗೆ ಜು. 28ರಂದು ಬಡಗ ಎಡಪದವು ಗ್ರಾಮದ ಬೈತರಿ ಗೋಪಾಲಕೃಷ್ಣ ಭಜನ ಮಂದಿರದ ಬಳಿಯಲ್ಲಿದ್ದ ವಾಹನದಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಒಟ್ಟು 750 ಕೆ.ಜಿ. ತೂಕದ ದನದ ಮಾಂಸವನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ.
- Advertisement -