Friday, May 17, 2024
spot_imgspot_img
spot_imgspot_img

ಹತ್ತು ಸಾವಿರಕ್ಕೂ ಅಧಿಕ ಮಸೀದಿಗಳಿಗೆ ಧ್ವನಿವರ್ಧಕ ಪರವಾನಗಿ ನೀಡಿದ ರಾಜ್ಯ ಸರ್ಕಾರ

- Advertisement -G L Acharya panikkar
- Advertisement -

ರಾಜ್ಯ ಸರ್ಕಾರವು ರಾಜ್ಯಾದ್ಯಂತ ಮಂದಿರ, ಮಸೀದಿ, ಚರ್ಚ್‌‌ಗಳ ಧ್ವನಿವರ್ಧಕ ಪರವಾನಗಿ ನೀಡಿದೆ. ರಾಜ್ಯ ಸರ್ಕಾರವು ಧ್ವನಿವರ್ಧಕ ಬಳಕೆ ಕುರಿತಂತೆ ಅರ್ಜಿಗಳನ್ನು ಪರಿಶೀಲನೆ ಪೂರ್ಣಗೊಳಿಸಿದ್ದು, ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ 450 ರೂ.ಶುಲ್ಕ ವಿಧಿಸಲಾಗಿದೆ. ರಾಜ್ಯದಲ್ಲಿ 10,889 ಕ್ಕೂ ಹೆಚ್ಚು ಮಸೀದಿಗಳು ಸೇರಿದಂತೆ ಮಂದಿರ, ಚರ್ಚ್ ಗಳ 17,850 ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ನೀಡಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಧ್ವನಿವರ್ಧಕ ಪರವಾನಗಿಗಳು 1,841 ಆಗಿದ್ದು, ಇದರಲ್ಲಿ ಮಸೀದಿಗಳು, ದೇವಾಲಯಗಳು, ಚರ್ಚ್‌‌ಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿವೆ.

ಈ ವರ್ಷದ ಆರಂಭದಲ್ಲಿ, ಕರ್ನಾಟಕ ಮತ್ತು ಇತರ ರಾಜ್ಯಗಳು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬೆಳಿಗ್ಗೆ 6 ಗಂಟೆಯ ಮೊದಲು ಧ್ವನಿವರ್ಧಕಗಳನ್ನು ಬಳಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಮಸೀದಿಗಳು ಉಲ್ಲಂಘಿಸಿವೆ ಎಂದು ಬಜರಂಗದಳದಂತಹ ಸಂಘಟನೆಗಳು ಆರೋಪಿಸಿದ್ದವು.

ಒತ್ತಡಕ್ಕೆ ಮಣಿದ ಬಿಜೆಪಿ ಸರ್ಕಾರ ಈ ವರ್ಷದ ಮೇ ತಿಂಗಳಲ್ಲಿ ಸುತ್ತೋಲೆ ಹೊರಡಿಸಿ, ಎಲ್ಲ ಧ್ವನಿವರ್ಧಕ ಬಳಕೆದಾರರಿಗೆ ಲಿಖಿತ ಅನುಮತಿ ಪಡೆಯುವಂತೆ ಸೂಚಿಸಿತ್ತು. ಪರವಾನಗಿಗಳನ್ನು ನೀಡಲು ಒಂದು ಸಮಿತಿಯನ್ನು ರಚಿಸಲಾಯಿತು.

- Advertisement -

Related news

error: Content is protected !!