- Advertisement -
- Advertisement -
ಕಾಸರಗೋಡು: ಕುಂಬಳೆ ಸೀಮೆಯ ಪ್ರಸಿದ್ಧ ತಾಂತ್ರಿಕ ತಜ್ಞ,ಅನೇಕ ದೇವಸ್ಥಾನ,ದೈವಸ್ಥಾನಗಳ ಪ್ರತಿಷ್ಠಾ ಬ್ರಹ್ಮಕಲಶ ನೆರವೇರಿಸಿರುವ ಅಪ್ರತಿಮ ತಾಂತ್ರಿಕ ಪಂಡಿತರಾದ ಬ್ರಹ್ಮ ಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ (77) ಮಂಗಳವಾರ ರಾತ್ರಿ ವಿಧಿವಶರಾದರು.ಅನಾರೋಗ್ಯಕ್ಕೆ ತುತ್ತಾಗಿದ್ದ ಇವರನ್ನು ಮಂಗಳವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
15ನೇ ಶತಮಾನದಲ್ಲಿ ಕುಂಬಳೆಯ ಕವಿಸಿಂಹ ರಾಜನು ಅಡೂರು ದೇಲಂಪಾಡಿ ವ್ಯಾಪ್ತಿಯಲ್ಲಿ ಉಂಬಳಿ ಬಿಟ್ಟ ಭೂಮಿಯ ಬಗ್ಗೆ ಕನ್ನಡ ಹಾಗು ಅದೇ ಶತಮಾನದ ಆಸುಪಾಸಿನಲ್ಲಿ ಸಂತತಿ ದತ್ತಿಗೆ ಸಂಬಂಧಿಸಿದ ತುಳು ಶಾಸನಗಳು ದೇಲಂಪಾಡಿಯಲ್ಲಿ ಈಗಲೂ ಕಂಡುಬರುತ್ತಿದ್ದು, ಇದು ದೇಲಂಪಾಡಿ ತಾಂತ್ರಿಕ ಮನೆತನದ ಮಹತ್ವವನ್ನು ಸಾರಿ ಹೇಳುತ್ತಿದೆ.
ಮೃತರ ಪತ್ನಿ,ಸಂಸ್ಕೃತ ವಿದ್ವಾಂಸೆಯಾದ ಸುಗುಣ ಬಿ.ತಂತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
- Advertisement -