Friday, May 3, 2024
spot_imgspot_img
spot_imgspot_img

ಬಾಲವಿಕಾಸದ ಕ್ರೀಡಾಂಗಣದಲ್ಲಿ ಕಲ್ಲಡ್ಕ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದ ಸಮಾರೋಪ ಸಮಾರಂಭ

- Advertisement -G L Acharya panikkar
- Advertisement -
vtv vitla

ವಿಟ್ಲ: ಮಾಣಿ‌‌‌ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನೂತನ ಕ್ರೀಡಾಂಗಣದಲ್ಲಿ ಅಕ್ಟೋಬರ್ 6 ಮತ್ತು 7ರಂದು ನಡೆದ ಕಲ್ಲಡ್ಕ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಇಲಾಖಾ ಕ್ರೀಡಾ ಕೂಟದ ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷ ಪ್ರಹ್ಲಾದ್ ಜೆ ಶೆಟ್ಟಿಯವರು “ಅಭ್ಯಾಸವೆನ್ನುವುದು ಪುಸ್ತಕದಂತೆ ದಿನನಿತ್ಯ ತೆರೆಯಬೇಕು. ಪ್ರತಿನಿತ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಪ್ರಯತ್ನಪಟ್ಟರೆ ಕ್ರೀಡಾ ಸಾಮರ್ಥ್ಯ ಬೆಳೆದು ದಾಖಲೆಗಳು ನಿಮ್ಮದಾಗುತ್ತದೆ ಎಂದರು.

ಮಾಣಿ ವಲಯದ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್ ಮಾತನಾಡಿ “ಬಾಲವಿಕಾಸದ ಹೊಸ ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ನಡೆದ ಕ್ರೀಡಾಕೂಟವು ಅದ್ದೂರಿಯಾಗಿ, ವ್ಯವಸ್ಥಿತವಾಗಿ ನೆರವೇರಿದೆ.” ಎಂದು ಸಂಸ್ಥೆಯನ್ನು ಅಭಿನಂದಿಸಿದರು.

ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ವಯೋಮಾನ 14ರ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ, ಬಾಲಕಿಯರ ವಿಭಾಗದಲ್ಲಿ ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ, ವಯೋಮಾನ 14ರ 8ನೇ ತರಗತಿ ಬಾಲಕರ ವಿಭಾಗದಲ್ಲಿ ಶ್ರೀರಾಮ ಶಾಲೆ ಕಲ್ಲಡ್ಕ, ಬಾಲಕಿಯರ ವಿಭಾಗದಲ್ಲಿ ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಡ್ಕ, ವಯೋಮಾನ 17ರ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ದೇವಮಾತ ಆಂಗ್ಲ ಮಾಧ್ಯಮ ಶಾಲೆ, ಅಮ್ಟೂರು, ಬಾಲಕಿಯರ ವಿಭಾಗದಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ., ವಿದ್ಯಾನಗರ, ಪೆರಾಜೆ ಮಾಣಿ ಪಡೆದುಕೊಂಡಿದೆ.

ವೇದಿಕೆಯಲ್ಲಿ ಕಲ್ಲಡ್ಕ ವಲಯದ ನೋಡಲ್ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ್ ನಾಯ್ಕ್, ಬಾಲವಿಕಾಸದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಉಪಸ್ಥಿತರಿದ್ದರು. ಬಾಲವಿಕಾಸದ ದೈಹಿಕ ಶಿಕ್ಷಣ ಶಿಕ್ಷಕರಾದ ದಿನಕರ್ ಪೂಜಾರಿ ಮತ್ತು ವಿಶಾಲಾಕ್ಷಿ ಹೆಚ್ ಆಳ್ವ ಸಹಕರಿಸಿದರು. ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ಸ್ವಾಗತಿಸಿ, ಆಡಳಿತಾಧಿಕಾರಿ ರವೀಂದ್ರ ದರ್ಬೆ ವಂದಿಸಿದರು. ಸಹಶಿಕ್ಷಕಿಯರಾದ ಸುಧಾ ಎನ್ ರಾವ್ ಮತ್ತು ಸುಪ್ರಿಯಾ ಡಿ ಕಾರ್ಯಕ್ರಮ ನಿರೂಪಿಸಿದರು.



- Advertisement -

Related news

error: Content is protected !!