Friday, July 11, 2025
spot_imgspot_img
spot_imgspot_img

ಹಂಪಿಯ ಬಡವಿಲಿಂಗ ದೇವಸ್ಥಾನದ ಪಾಣಿಪೀಠ ಹತ್ತಿ ಶಿವನ ಪೂಜೆ ಮಾಡುವ ಪೂಜಾರಿ ಕೃಷ್ಣ ಭಟ್ ಇನ್ನಿಲ್ಲ.

- Advertisement -
- Advertisement -

ಬಳ್ಳಾರಿ: ಶಿವಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಜಗತ್ತಿನ ಗಮನ ಸೆಳೆದವರು ಹಂಪಿಯ ಬಡವಿಲಿಂಗ ದೇವಸ್ಥಾನದ ಪೂಜಾರಿ ಕೃಷ್ಣ ಭಟ್. ಶಿವನ ದೇವಸ್ಥಾನಕ್ಕೆ ಹೋಗುವವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಪೂಜಾರಿ ಕೃಷ್ಣ ಭಟ್ ತಮ್ಮ ೮೭ನೇ ವಯಸ್ಸಿನಲ್ಲಿ ಇಂದು ಶಿವನ ಪಾದ ಸೇರಿದ್ದಾರೆ.

ವಯೋಸಹಜ ಕಾಯಿಯಿಲೆಯಿಂದ ಅವರು ಬಳಲುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯ ಕೃಷ್ಣ ಭಟ್ ಅವರು ೧೯೭೯ರಲ್ಲಿ ಹಂಪಿಗೆ ಬಂದು ನೆಲೆಸಿದ್ದವರು. ಅಂದಿನಿAದ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದರು. ಕಳೆದ ವರ್ಷ ಅನಾರೋಗ್ಯದಿಂದ ಪೂಜೆ ನಿಲ್ಲಿಸಿದ್ದರು. ಸದ್ಯಕ್ಕೆ ಅವರ ಮಗ ಲಿಂಗದ ಪೂಜೆ ಮಾಡುತ್ತಿದ್ದಾರೆ.

driving

ನೀರಿನೊಳಕ್ಕೆ ಇಳಿದು ವಿಶಾಲವಾಗಿರುವ ಶಿವಲಿಂಗಕ್ಕೆ ಕೃಷ್ಣ ಭಟ್ ಅವರು ಪೂಜೆ ಸಲ್ಲಿಸಲು ಶಿವನ ಪಾಣಿಪೀಠವನ್ನು ಏರಲೇಬೇಕಿತ್ತು. ಆದ್ದರಿಂದ ಪಾಣಿಪೀಠ ಏರಿ ಶಿವನ ಪೂಜೆ ಸಲ್ಲಿಸುತ್ತಿದ್ದ ಏಕೈಕ ವ್ಯಕ್ತಿ ಎಂದು ಇವರು ಹೆಸರುವಾಸಿಯಾಗಿದ್ದಾರೆ

- Advertisement -

Related news

error: Content is protected !!