Friday, April 26, 2024
spot_imgspot_img
spot_imgspot_img

ಬಲೂಚಿಸ್ತಾನದಲ್ಲಿಉಗ್ರರ ದಾಳಿ

- Advertisement -G L Acharya panikkar
- Advertisement -

ಪಾಕಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸರ್ಕಾರಿ ಸ್ವಾಮ್ಯದ ತೈಲ ಸ್ಥಾವರಕ್ಕೆ ಕಾರ್ಮಿಕರನ್ನು ತಲುಪಿಸಿ ಹಿಂದಿರುಗುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಮಿಲಿಟರಿ ವಾಹನ ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಬೆಟ್ಟದ ಮೇಲಿನಿಂದ ಧಾಳಿ ನಡೆಸಿದ್ದಾರೆ.

ಬಲೂಚಿಸ್ತಾನದ ಗ್ವಾದಾರ್ ಜಿಲ್ಲೆಯ ಒರ್ಮಾರ ಪಟ್ಟಣದ ತೈಲ ಸ್ಥಾವರಕ್ಕೆ ಕಾರ್ಮಿಕರನ್ನು ತಲುಪಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಾಳಿ ಸಂದರ್ಭದಲ್ಲಿ ಹೆಚ್ಚಿನ ಕಾರ್ಮಿಕರು ವಾಹನದಲ್ಲಿ ಇರಲಿಲ್ಲ.

ಪಾಕಿಸ್ತಾನ ಸೇನೆ ದಾಳಿ ನಡೆದಿರುವುದನ್ನು ಖಚಿತಪಡಿಸಿದೆ. ಯಾವುದೇ ಸಂಘಟನೆ ಇದುವರೆಗೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಪಾಕಿಸ್ತಾನ, ಬಲೂಚಿಗಳ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ ಎಂಬ ಆರೋಪಗಳ ಮಧ್ಯೆಯೇ ಈ ದಾಳಿ ನಡೆಸಲಾಗಿದೆ.

- Advertisement -

Related news

error: Content is protected !!