Thursday, May 16, 2024
spot_imgspot_img
spot_imgspot_img

ಚುನಾವಣೆಯಲ್ಲಿ ಕೋಟ್ಯಾಧಿಪತಿ ಟಿಎಂಸಿ ಅಭ್ಯರ್ಥಿಯ ವಿರುದ್ಧ ಕೂಲಿ ಕಾರ್ಮಿಕನ ಪತ್ನಿಗೆ ಭರ್ಜರಿ ಜಯ!

- Advertisement -G L Acharya panikkar
- Advertisement -

ಪಶ್ಚಿಮ ಬಂಗಾಳ: ಒಂದೆಡೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ (ಟಿಎಂಸಿ) ಭರ್ಜರಿ ಜಯ ಗಳಿಸಿರುವ ಬೆನ್ನಲ್ಲೇ, ಬಿಜೆಪಿ ಕೂಡ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳಿಸಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸ್ಪರ್ಧಿಸಿದ್ದ ನಂದಿಗ್ರಾಮ ಕೊನೆಯ ಕ್ಷಣದಲ್ಲಿ ಅಚ್ಚರಿಯ ಫಲಿತಾಂಶ ನೀಡಿರುವುದು ಎಲ್ಲೆಡೆ ಸುದ್ದಿಯಾಯಿತು. ಆದರೆ ಅದೇ ರೀತಿ ಇನ್ನೊಂದು ಕ್ಷೇತ್ರ ಇದೀಗ ಭಾರಿ ಕುತೂಹಲವನ್ನೂ, ಅಚ್ಚರಿಯನ್ನೂ ಮೂಡಿಸಿದೆ. ಅದೇ ಬಂಕೂರ ಜಿಲ್ಲೆಯ ಸಲ್ಟೋರಾ ವಿಧಾನಸಭೆ ಕ್ಷೇತ್ರ.

ದಿನವೊಂದಕ್ಕೆ 400 ರೂಪಾಯಿ ದುಡಿಯಲೂ ಆಗದ, ತೀರಾ ಕಡುಬಡತನದಲ್ಲಿರುವ, ಬುಡಕಟ್ಟು ಹಿನ್ನೆಲೆಯ ಮಹಿಳೆ, ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಚಂದನಾ ಬೌರಿ 4145 ಮತಗಳ ಅಂತರಗಳಿಂದ ಗೆಲುವು ಸಾಧಿಸಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಿಯಾಗಿದ್ದಾರೆ. ಕೋಟ್ಯಧಿಪತಿ ಟಿಎಂಸಿಯ ಸಂತೋಷ್‌ ಕುಮಾರ್‌ ಮೊಂಡಲ್‌ ಅವರನ್ನು ಚಂದನಾ ಸೋಲಿಸಿದ್ದಾರೆ.

ಚಂದನಾ ಬಳಿ ಇರುವುದು ಮೂರು ಮೇಕೆ, ಮೂರು ಹಸು ಮತ್ತು ಒಂದು ಗುಡಿಸಲು ಸೇರಿ ಒಟ್ಟು ಆಸ್ತಿ ಮೌಲ್ಯ 31,985. ಇವರ ಪತಿ ಕೂಡ ದಿನಗೂಲಿ ಕಾರ್ಮಿಕರಾಗಿದ್ದಾರೆ. ಟಿಕೆಟ್‌ ಘೋಷಣೆಯಾಗುವ ವರೆಗೆ ನಾನು ಅಭ್ಯರ್ಥಿ ಎಂದು ತಿಳಿದಿರಲಿಲ್ಲ. ಅದೂ ಬಿಜೆಪಿ ನನಗೆ ಟಿಕೆಟ್‌ ನೀಡುತ್ತದೆ ಎಂದು ಕನಸಿನಲ್ಲಿಯೂ ನೆನೆಸಿರಲಿಲ್ಲ ಎಂದಿದ್ದಾರೆ ಚಂದನಾ.

driving

ಚಂದನಾ ಬೌರಿ ಒಟ್ಟು 91,648 ಮತಗಳನ್ನು ಪಡೆದು 87,503 ಮತ ಪಡೆದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ 4, 145 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಚಂದನಾ ಜಯಗಳಿಸುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಅವರಿಗೆ ಶುಭಾಶಯ, ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದ್ದು ಹಲವು ರೀತಿಯಲ್ಲಿ ಅವರ ಗೆಲುವನ್ನು ಬಣ್ಣಿಸುತ್ತಿದ್ದಾರೆ. 10ನೇ ತರಗತಿಯವರೆಗೆ ಕಲಿತಿರುವ ಚಂದನಾ ಮೂರು ಮಕ್ಕಳ ತಾಯಿ, ಪತಿ ಮತ್ತು ಪತ್ನಿ ಕಷ್ಟಪಟ್ಟು ಹಸು ಮತ್ತು ಆಡುಗಳನ್ನು ಕೂಡ ಸಾಕುತ್ತಿದ್ದಾರೆ.

- Advertisement -

Related news

error: Content is protected !!