Thursday, May 2, 2024
spot_imgspot_img
spot_imgspot_img

ಬ್ಲ್ಯಾಕ್ ಫಂಗಸ್ ಗೆ ರಾಜ್ಯದಲ್ಲಿ ನಾಲ್ವರು ಬಲಿ!

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಮಧ್ಯೆ ಬ್ಲ್ಯಾಕ್​ ಫಂಗಸ್​ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಂಬಂಧ ಆರೋಗ್ಯ ಸಚಿವ ಕೆ.ಸುಧಾಕರ್​​ ನೇತೃತ್ವದಲ್ಲಿ ತಜ್ಞರ ಸಭೆ ನಡೆಯಿತು.

ನೇತ್ರ ತಜ್ಞ ಭುಜಂಗಶೆಟ್ಟಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಬ್ಲ್ಯಾಕ್​​ ಫಂಗಸ್​ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್​, ಕೇಂದ್ರ ಸರ್ಕಾರ ಕಪ್ಪು ಶಿಲೀಂದ್ರಿ ಕಾಯಿಲೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದೆ. ಇದರ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಬ್ಲ್ಯಾಕ್​ ಫಂಗಸ್​​ ಕೋವಿಡ್​ನಷ್ಟು ಭೀಕರವಲ್ಲ. ಕೇಂದ್ರ ಸರ್ಕಾರದಿಂದ ಈ ಕಾಯಿಲೆ ಬಗ್ಗೆ ಕೆಲವು ಮಾರ್ಗಸೂಚಿ ನೀಡಲಾಗಿದೆ. ಕೆಲವು ರಾಜ್ಯದಲ್ಲಿ ಪ್ರೋಟೋಕಾಲ್ ಜಾರಿಯಲ್ಲಿದೆ. ಹೀಗಾಗಿ ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಯಾರಿಗೆ ಮಿತಿಮೀರಿದ ಮಧುಮೇಹ ಇರುತ್ತದೆಯೋ ಅವರಿಗೆ ಕೊರೋನಾ ಬಂದು ಅತಿಯಾದ ಸ್ಟಿರಾಯಿಡ್ಸ್​​ ಬಳಸಿದರೆ ಅವರಿಗೆ ಬ್ಲ್ಯಾಕ್​​ ಫಂಗಸ್​ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೈ ಶುಗರ್​ ಇರುವವರು ಸೋಂಕಿನಿಂದ ಗುಣಮುಖರಾದ ಬಳಿಕ ಕಂಟ್ರೋಲ್‌ನಲ್ಲಿ ಇರಬೇಕು. ಇಲ್ಲವಾದರೆ ಅತಿ ಬೇಗ ಸೆಕೆಂಡರಿ ಇನ್ಫೆಕ್ಷನ್‌ಗೆ ತುತ್ತಾಗುತ್ತಾರೆ. ಕ್ಯಾನ್ಸರ್ ಇರುವವರು, ಅಂಗಾಂಗ ಕಸಿ ಮಾಡಿಸಿಕೊಂಡಿರುವವರಿಗೆ, ಹೆಚ್‌ಐವಿ ಇನ್ಫೆಕ್ಷನ್ ಇರುವವರಿಗೂ ಬ್ಲ್ಯಾಕ್​​ ಫಂಗಸ್​​ ಬರುವ ಸಾಧ್ಯತೆ ಇದೆ ಎಂದರು. ಪ್ರಾರಂಭದಲ್ಲೇ ಮೂಗು, ಗಂಟಲು, ಕಿವಿಯನ್ನು ತೋರಿಸಿಕೊಳ್ಳಬೇಕು. ಎಲ್ಲಾ ವೈದ್ಯರು ಇಂಥಹ ವ್ಯಕ್ತಿಗಳನ್ನು ಗಮನಹರಿಸಿ‌ ನೋಡಬೇಕು. ಇದು ನೋಟಿಫೈಡ್ ಡಿಸೀಸ್​ ಅಗಿದ್ದು, ಇದನ್ನು ಖಾಸಗಿಯಾಗಿ ಇಟ್ಟಕೊಳ್ಳುವಂತಿಲ್ಲ. ಸರ್ಕಾರದ ಗಮನಕ್ಕೆ ತರಬೇಕು ಎಂದು ಸರ್ಕಾರ ಆದೇಶಿಸಿದೆ. ಟ್ಯಾಪ್ ನೀರು ಬಳಸುವುದರಿಂದ ಬ್ಲ್ಯಾಕ್​ ಫಂಗಸ್​​ ಬರುತ್ತೆ ಅನ್ನೋ ಅನುಮಾನ ನಮಗೂ ಇದೆ. ಈ ಬಗ್ಗೆ ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದೇವೆ. ಇನ್ನು ಬ್ಲ್ಯಾಕ್​ ಫಂಗಸ್​ ಕಾಯಿಲೆ ಗಾಳಿಯಲ್ಲಿ ಹರಡುವುದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಇಲ್ಲಿವರೆಗೆ 97 ಜನರಿಗೆ ಬ್ಲ್ಯಾಕ್ ಫಂಗಸ್ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್​​ ಫಂಗಸ್​ ಕಾಣಿಸಿಕೊಂಡು ಈವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಬೆಂಗಳೂರಿನವರಾದರೆ, ಒಬ್ಬರು ಕೋಲಾರ ಜಿಲ್ಲೆಯವರು. ಇನ್ನು ಬೆಂಗಳೂರು ಹೊರತುಪಡಿಸಿ ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್ , ಜಿಮ್ಸ್, ಕಿಮ್ಸ್, ಕೆಎಂಸಿ ಹಾಗೂ ವೆನ್‌ಲಾಕ್ ಆಸ್ಪತ್ರೆಗಳಲ್ಲಿ ಬ್ಲ್ಯಾಕ್​ ಫಂಗಸ್​ಗೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.

ಚಿಕಿತ್ಸೆಗಾಗಿ 40-60 ವಯಲ್ಸ್ ಬೇಕಿದೆ. ನಮಗೆ 1,050 ರಷ್ಟು ವಯಲ್ಸ್‌ ನೀಡಲು ಕೇಂದ್ರದಿಂದ ಮಂಜೂರಾತಿ ಆಗಿದೆ. ಐಸೋಕೋನೋಸೋಲ್, ಫೋಸೋಕೋನೋಸೋಲ್ ಗೆ 20 ಸಾವಿರ ವಯಲ್ಸ್‌ಗೆ ನಾವು ಬೇಡಿಕೆ ಇಟ್ಟಿದ್ದೇವೆ. ಇನ್ಮುಂದೆ ಡಾಕ್ಟರ್ ಹೇಳದೆ ಸ್ಟಿರಾಯಿಡ್ಸ್​ಗಳನ್ನು ಯಾರೂ ನೀಡುವಂತಿಲ್ಲ. ಬಿಬಿಎಂಪಿ ಕೊಟ್ಟಿರೋದು ನಮಗೆ ಗೊತ್ತಿಲ್ಲ. ಈ ಬಗ್ಗೆ ನಾನು ಆಯುಕ್ತರ ಜೊತೆ ಮಾತನಾಡುತ್ತೇನೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್​ ತಿಳಿಸಿದರು. ಜೊತೆಗೆ ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ರಾಜ್ಯ ಜನರಲ್ಲಿ ಮನವಿ ಮಾಡಿಕೊಂಡರು.

driving
- Advertisement -

Related news

error: Content is protected !!