Wednesday, December 4, 2024
spot_imgspot_img
spot_imgspot_img

ಅಡುಗೆ ಮಾಡುವ ಕುಕ್ಕರ್‌ನಲ್ಲೇ ಡ್ರಗ್ಸ್ ತಯಾರಿ – ಬೆಂಗಳೂರಲ್ಲಿ ಪೆಡ್ಲರ್ ಬಂಧನ

- Advertisement -
- Advertisement -

ಬೆಂಗಳೂರು: ಅಡುಗೆ ಮನೆಯನ್ನೇ ಡ್ರಗ್ಸ್ ತಯಾರಿಸುವ ಕಾರ್ಖಾನೆಯನ್ನಾಗಿ ಮಾಡಿಕೊಂಡಿದ್ದ ನೈಜೀರಿಯಾದ ಪ್ರಜೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧನ ಮಾಡಿದ್ದಾರೆ.

ನೈಜೀರಿಯಾ ಪ್ರಜೆ ಬೆಂಜಮಿನ್ ಅವಲಹಳ್ಳಿಯ ತನ್ನ ಮನೆಯ ಕಿಚನ್‌ನಲ್ಲಿ ಕಚ್ಚಾ ಪದಾರ್ಥ ಬಳಸಿಕೊಂಡು ಸ್ಟೌ ಮೇಲಿಟ್ಟು ಬೆಂಕಿ ಹೊತ್ತಿಸಿ, ದೋಸೆಯ ರೀತಿ ಮಾಡಿಕೊಳ್ತಿದ್ದ. ಆ ಬಳಿಕ ಪ್ರೆಶರ್ ಕುಕ್ಕರ್‌ಗೆ ಪೈಪ್ ಅಳವಡಿಸಿ ಆವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ಎಂಡಿಎಂಎ ತಯಾರು ಮಾಡುತ್ತಿದ್ದ.ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರಾಮಮೂರ್ತಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಆರೋಪಿ ಬಳಿ 100 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆರೋಪಿ ಎಲ್ಲಿಂದ ಎಂಡಿಎಂಎ ತರಿಸುತ್ತಿದ್ದಾನೆ ಎಂದು ಪರಿಶೀಲನೆ ನಡೆಸಿದ ವೇಳೆ ಬೆಂಜಮಿನ್ ವಾಸವಿದ್ದ ಮನೆಯಲ್ಲೇ ಎಂಡಿಎಂಎ ಕ್ರಿಸ್ಟಲ್ ತಯಾರಿಸುತಿದ್ದ ವಿಚಾರ ಬೆಳಕಿಗೆ ಬಂದಿದೆ.

ಎಂಡಿಎಂಎ ತಯಾರು ಮಾಡಲು ಬೇಕಿದ್ದ ಕಚ್ಚಾವಸ್ತುಗಳನ್ನು ಖರೀದಿ ಮಾಡುತ್ತಿದ್ದ ಆರೋಪಿ ನಂತರ ಹಂತ ಹಂತವಾಗಿ ಎಂಡಿಎಂಎ ತಯಾರು ಮಾಡುತ್ತಿದ್ದ. ಡ್ರಗ್ಸ್ ಡಿಮಾಂಡ್ ಎಷ್ಟು ಇದೆ, ಅಷ್ಟನ್ನು ತಯಾರು ಮಾಡಿ, ನಂತರ ಅದನ್ನು ಕೇವಲ ನೈಜೀರಿಯಾ ಮತ್ತು ಆಫ್ರಿಕಾ ಮೂಲದವರಿಗೆ ಮಾರಾಟ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ. ತಯಾರು ಮಾಡಿಟ್ಟಿದ್ದ ಸುಮಾರು 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮತ್ತು ಅದನ್ನು ತಯಾರು ಮಾಡಲು ಬೇಕಾಗಿದ್ದ 5 ಕೆಜಿ ಕಚ್ಚಾವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!