Friday, May 3, 2024
spot_imgspot_img
spot_imgspot_img

ಲೆಹೆಂಗಾದಲ್ಲಿ ಬಚ್ಚಿಟ್ಟು ಮಾದಕ ವಸ್ತುಗಳ ಸಾಗಾಟ; 3 ಕೆಜಿ ಡ್ರಗ್ಸ್​ ಸಹಿತ ಓರ್ವ NCB ವಶಕ್ಕೆ!

- Advertisement -G L Acharya panikkar
- Advertisement -

ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ ದಂಧೆ ಹೆಚ್ಚುತ್ತಲೇ ಇದೆ. ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ತಮಗೆ ಸಿಕ್ಕ ಮಾಹಿತಿಯನ್ನು ಆಧರಿಸಿ, ಬೆಂಗಳೂರಿನಲ್ಲಿ ಸುಮಾರು 3 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಎನ್‌ಸಿಬಿ ಬೆಂಗಳೂರಿನ ವಲಯ ನಿರ್ದೇಶಕ ಅಮಿತ್ ಘಾವಟೆ ನೇತೃತ್ವದ ತಂಡ ಪಾರ್ಸೆಲ್ ಅನ್ನು ತಡೆಹಿಡಿದು ಮೂರು ಲೆಹೆಂಗಾಗಳಲ್ಲಿ ಇರಿಸಲಾಗಿದ್ದ ಸ್ಯೂಡೋಫೆಡ್ರಿನ್ ಎಂಬ ಸುಮಾರು 3 ಕೆಜಿ ಬಿಳಿ ಬಣ್ಣದ ಹರಳಿನ ರೂಪದಲ್ಲಿರುವ ಡ್ರಗ್ಸ್​ ಅನ್ನು ವಶಪಡಿಸಿಕೊಂಡಿದ್ದಾರೆ. ಮಡಿಚಿಟ್ಟಿದ್ದ ಲೆಹೆಂಗಾವನ್ನು ಬಿಚ್ಚಿ ನೋಡಿದಾಗ ಅವುಗಳ ಮಡಿಕೆಗಳಲ್ಲಿ ಈ ಡ್ರಗ್ಸ್​ ಅನ್ನು ಇರಿಸಲಾಗಿತ್ತು. ಬ್ಯಾಗ್ ಅನ್ನು ಸ್ಕ್ಯಾನ್ ಮಾಡಿದಾಗ ಈ ನಿಷೇಧಿತ ವಸ್ತು ಬಗ್ಗೆ ಸುಳಿವು ಸಿಕ್ಕಿತ್ತು.

ಪಾರ್ಸೆಲ್ ಅನ್ನು ಆಂಧ್ರಪ್ರದೇಶದ ನರಸಾಪುರಂನಿಂದ ಬುಕ್ ಮಾಡಲಾಗಿತ್ತು. ಆ ಪಾರ್ಸೆಲ್ ಅನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕಿತ್ತು. ಆದರೆ, ಈ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಈ ಡ್ರಗ್ಸ್​ ಸಾಗಿಸುತ್ತಿದ್ದವರನ್ನು ಎನ್​ಸಿಬಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಚೆನ್ನೈನಲ್ಲಿರುವ ಎನ್‌ಸಿಬಿ ತಂಡಕ್ಕೆ ಮಾಹಿತಿ ನೀಡಲಾಗಿದೆ. ಪಾರ್ಸೆಲ್ ಕಳುಹಿಸಿದವರ ನಿಜವಾದ ವಿಳಾಸವನ್ನು ಗುರುತಿಸಿ ಶುಕ್ರವಾರ ಅವನನ್ನು ಬಂಧಿಸಲಾಗಿದೆ. ಪಾರ್ಸೆಲ್ ಕಳುಹಿಸಲು ನಕಲಿ ವಿಳಾಸಗಳು ಮತ್ತು ದಾಖಲೆಗಳನ್ನು ಬಳಸಿರುವುದು ಕಂಡುಬಂದಿದೆ.

- Advertisement -

Related news

error: Content is protected !!