Saturday, April 27, 2024
spot_imgspot_img
spot_imgspot_img

ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್; ಈಗ ಕನ್ನಡ ವಿಶ್ವ ಲಿಪಿಗಳ ರಾಣಿ!

- Advertisement -G L Acharya panikkar
- Advertisement -

ಬೆಂಗಳೂರು: ಗೂಗಲ್ ನಲ್ಲಿ ಕನ್ನಡದ ಬಗ್ಗೆ ಸರ್ಚ್ ಮಾಡುವಂತ ಸಂದರ್ಭದಲ್ಲಿ ಕನ್ನಡವನ್ನು ಕೊಳಕು ಭಾಷೆ ಎಂಬುದಾಗಿ ತೋರಿಸಿದಂತ ಗೂಗಲ್ ಸರ್ಚ್ ಇಂಜಿನ್ ವಿರುದ್ಧ, ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದರು. ಇದೀಗ ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್, ಕನ್ನಡದ ಬಗ್ಗೆ ಇದ್ದಂತ ತಪ್ಪನ್ನು ತಿದ್ದಿಕೊಂಡಿದೆ. ಅಲ್ಲದೇ ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬುದಾಗಿ ತಪ್ಪು ಸರಿ ಪಡಿಸಿ, ಕನ್ನಡಿಗರನ್ನು ಖುಷಿ ಪಡಿಸಿದೆ.

ಬಹುತೇಕರ ಅಂತರ್ಜಾಲದಲ್ಲಿ ಸರ್ಚ್ ಇಂಜಿನ್ ಆಗಿ ಗೂಗಲ್ ಅನ್ನು ಬಳಸುತ್ತಿದ್ದು, ಇದು ಅನೇಕರ ಇಷ್ಟವಾದಂತ ಸರ್ಚ್ ಇಂಜಿನ್ ಕೂಡ ಆಗಿದೆ. ಆದರೆ ಇಂತಹ ಗೂಗಲ್ ಸರ್ಚ್ ಇಂಜಿನ್ ನಲ್ಲಿಯೇ ಕನ್ನಡದ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಅಪಮಾನ ಮಾಡಲಾಗಿತ್ತು. ಕನ್ನಡವನ್ನು ಕೊಳಕು ಭಾಷೆ ಎಂಬುದಾಗಿ ಬಿಂಬಿಸಲಾಗಿತ್ತು.

ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಕಿಡಿಕಾರಿದ್ದರು. ಟ್ವಿಟ್ಟರ್ ಮೂಲಕ ಸಮರ ಸಾರಿದ್ದಂತ ಕನ್ನಡಿಗರು, ತಪ್ಪು ತಿದ್ದುವಂತೆ ಗೂಗಲ್ ಗೆ ಎಚ್ಚರಿಕೆಯನ್ನು ನೀಡಿದ್ದು, ಇದೀಗ ಗೂಗಲ್ ಕನ್ನಡಿಗರ ಒತ್ತಡಕ್ಕೆ ಮಣಿದಿದೆ. ಕನ್ನಡ ಅಂದರೆ ಕೊಳಕು ಭಾಷೆ ಎಂದು ತೋರಿಸುತ್ತಿದ್ದ ತಪ್ಪನ್ನು ತೆಗೆದು ಹಾಕಿ ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬುದಾಗಿ ಎತ್ತಿ ತೋರಿಸುವಂತ ಕೆಲಸ ಮಾಡಿದೆ.

- Advertisement -

Related news

error: Content is protected !!