Thursday, March 28, 2024
spot_imgspot_img
spot_imgspot_img

ಮೊದಲ ದಿನವೇ ವೈದ್ಯಕೀಯ ಕಾಲೇಜುಗಳಲ್ಲಿ ಶೇ.60ಕ್ಕೂ ಹೆಚ್ಚು ಹಾಜರಾತಿ!!

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ 8 ತಿಂಗಳ ಬಳಿಕ ಮಂಗಳವಾರ ಆರಂಭಗೊಂಡ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ದಿನವೇ ಶೇ.60ಕ್ಕೂ ಹೆಚ್ಚು ಹಾಜರಾತಿ ಇತ್ತು.


ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅಂತಿಮ ವರ್ಷದ ಕೋರ್ಸ್‌ಗಳ ತರಗತಿ ಆರಂಭವಾಗಿ 15 ದಿನ ಕಳೆದರೂ ಶೇ.15ರಷ್ಟು ಹಾಜರಾತಿ ದಾಖಲಾಗಿಲ್ಲ. ಆದರೆ ವೈದ್ಯಕೀಯ ಕಾಲೇಜ್‌ ಆರಂಭವಾದ ದಿನವೇ ಶೇ.60ಕ್ಕೂ ಹೆಚ್ಚು ಪ್ರಮಾಣದಲ್ಲಿ ಹಾಜರಾತಿ ದಾಖಲಾಗಿದೆ.
ಮೊದಲ ದಿನದಿಂದಲೇ ಪ್ರಾಯೋಗಿಕ ತರಗತಿಗೆ ಆದ್ಯತೆ ನೀಡಿರುವುದರಿಂದ ಹಾಗೂ ಇನ್ನೆರಡು ತಿಂಗಳಲ್ಲಿ ಪರೀಕ್ಷೆ ನಿಗದಿಯಾಗಿರುವುದರಿಂದ ಹಾಜರಾತಿ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.


ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಇರುವುದರಿಂದ ಹಾಜರಾತಿ ಹೆಚ್ಚಿದೆ. ಮುಂದಿನ ವಾರದಲ್ಲಿ ಶೇ.90ರಿಂದ ಶೇ.95ರಷ್ಟು ಹಾಜರಾತಿ ದಾಖಲಾಗಲಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಸ್‌. ಸಚ್ಚಿದಾನಂದ ತಿಳಿಸಿದ್ದಾರೆ.

- Advertisement -

Related news

error: Content is protected !!