Wednesday, May 15, 2024
spot_imgspot_img
spot_imgspot_img

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಪಕ್ಕ ನಿಂತು ಮಿಂಚಿದ್ದ ಲೇಡಿ ಪೊಲೀಸ್ ಯಾರು ಗೊತ್ತಾ..?

- Advertisement -G L Acharya panikkar
- Advertisement -

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲೇ ನಿಂತು ಮಿಂಚಿದ್ದ ಖಾಕಿ ಯಾರು ಗೊತ್ತಾ? ಕೂಲಿಂಗ್ ಗ್ಲಾಸ್ ಧರಿಸಿ ಮೋದಿಗೆ ಮೂರು ಅಡಿ ಸಮೀಪದಲ್ಲೇ ನೀಂತಿದ್ದ ಈ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಮೋದಿ ಪಕ್ಕ ನಿಂತ ಅಧಿಕಾರಿ ಯಾರು ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಲು ಶುರುವಾಗಿದ್ದಾರೆ.

ಹೌದು. ಬೆಂಗಳೂರಿನ ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬ್ರೈನ್ ಸೆಂಟರ್ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಪಕ್ಕದಲ್ಲಿ ನಿಂತಿದ್ದ ಕರ್ನಾಟಕ ಪೊಲೀಸ್ ಸೇವೆಯ ಭದ್ರತಾ ಅಧಿಕಾರಿ ಹೆಸರು ರೀಣಾ ರಘು ಸುವರ್ಣ. ಸದ್ಯ ಜೆಸಿ ನಗರದ ಎಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೀನಾ ಸುವರ್ಣ 2014 ರಲ್ಲಿ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದರು. ಪ್ರೊಬೇಷನರಿ ಅವಧಿಯಲ್ಲಿಯೇ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದ ರೀನಾ ರಘು ಸುವರ್ಣಾ ಅವರು ಇದೀಗ ಪ್ರಧಾನಿ ಪಕ್ಕದಲ್ಲೇ ನಿಂತು ಭದ್ರತೆ ಒದಗಿಸಿ ಭಾರೀ ಸುದ್ದಿಯಾಗಿದ್ದಾರೆ.

ಸೋಮವಾರ ಬಳಗ್ಗೆ ಮಲ್ಲೇಶ್ವರಂ ಬಳಿ ಇರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬ್ರೈನ್ ಸೆಂಟರ್ ಪ್ರಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕುವ ಕಾರ್ಯಕ್ರಮವಿತ್ತು. ಈ ವೇಳೆ ಪ್ರಧಾನಿ ಅಕ್ಕ ಪಕ್ಕ ಇದ್ದಿದ್ದು ಎನ್‌ಎಸ್ ಜಿ ಪಡೆ. ರಾಜ್ಯದಿಂದಲೂ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ಪ್ರಧಾನಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಆದರೆ, ಮೋದಿ ಅವರಿಂದ ಕೇವಲ ಎರಡು ಮೀಟರ್ ಅಂತರದಲ್ಲಿ ನಿಂತು ಗಮನ ಸೆಳೆದಿದ್ದು ಎಸಿಪಿ ರೀನಾ ಸುವರ್ಣಾ. ಪ್ರಧಾನಿಗಳಿಗೆ ಸಮೀಪ ಹೋಗಿ ಭದ್ರತೆ ಒದಗಿಸಿದ ಅವಕಾಶ ರೀನಾ ಅವರಿಗೆ ಸಿಕ್ಕಿದ್ದು ಇದೀಗ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಯಾರು ಈ ರೀನಾ ರಘು ಸುವರ್ಣ: 2014 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರು. ವ್ಯಾಸಂಗದ ಅವಧಿಯಲ್ಲಿ ಬೆಂಗಳೂರು ವಿವಿಯಲ್ಲಿ ಚಿನ್ನದ ಪದಕ ಗಿಟ್ಟಿಸಿದ್ದ ರೀನಾ ಸುವರ್ಣ ಅವರು, ರಾಜ್ಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರು. ಪ್ರೊಬೆಷನರಿ ಅವಧಿಯಲ್ಲಿಯೇ ನಾನಾ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವ ಮೂಲಕ ಬೆಂಗಳೂರಿನಲ್ಲಿ ಸದ್ದು ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಡಿವೈಎಸ್ಪಿಯಾಗಿ ಸೇವೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ರೀನಾ ಸುವರ್ಣ ಅವರು ಸುಮಾರು ಹನ್ನೊಂದು ಮಿಸ್ಸಿಂಗ್ ಪ್ರಕರಣ ಪತ್ತೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಸ್ಕೋ ಪ್ರಕರಣವನ್ನು ಒಂದು ದಿನದಲ್ಲಿ ಪತ್ತೆ ಮಾಡುವ ಮೂಲಕ ರೀನಾ ಅವರ ತನಿಖಾ ಶೈಲಿ ಅಧಿಕಾರಿಗಳ ಗಮನ ಸೆಳೆಯಿತು. ಜಿಗಣಿ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗದೇ ಉಳಿದಿದ್ದ ಅಪರಿಚಿತ ಶವ ಪ್ರಕರಣವನ್ನು ಬೇಧಿಸಿದ್ದರು. ಹೀಗೆ ಅಪರಾಧ ಪ್ರಕರಣಗಳನ್ನು ಕ್ಷಾಣಾಕ್ಷತೆಯಿಂದ ಪತ್ತೆ ಮಾಡುವ ಮೂಲಕ ರೀನಾ ಸುವರ್ಣ ಬೆಂಗಳೂರಿನಲ್ಲಿ ಸುದ್ದಿಯಾಗಿದ್ದಾರೆ.

ಮಾದಕ ಜಾಲದ ವಿರುದ್ಧ ಕಾರ್ಯಾಚರಣೆ:

ಇನ್ನು ಡ್ರಗ್ ಮಾಫಿಯಾ ವಿರುದ್ಧ ರೀನಾ ಸುವರ್ಣ ನಡೆಸಿರುವ ಕಾರ್ಯಾಚರಣೆ ಬಾರೀ ಸದ್ದು ಮಾಡಿದೆ. ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಎಡೆಮುರಿ ಕಟ್ಟುವಲ್ಲಿ ಎಸಿಪಿ ರೀನಾ ಸುವರ್ಣ ಯಶಸ್ವಿಯಾಗಿದ್ದರು. ಹಲವು ಮಾಫಿಯಾಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಮಹತ್ವದ ಪ್ರಕರಣ ಪತ್ತೆ ಮಾಡುವಲ್ಲಿ ರೀನಾ ಅವರು ಖ್ಯಾತಿಯಾಗಿದ್ದಾರೆ.

ಕೊರೊನಾ ವಾರಿಯರ್:

ಇನ್ನು ಕೊರೊನಾ ಕಾಲದಲ್ಲಿ ತಮ್ಮ ಮನೆ ಸ್ವಚ್ಛತೆ ಜತೆಗೆ ಕೆಲಸ ಮಾಡುವ ಪೊಲೀಸ್ ಠಾಣೆಗಳು ಸ್ವಚ್ಛವಾಗಿಟ್ಟುಕೊಳ್ಳುವ ಅಭಿಯಾನ ಶುರು ಮಾಡಿ ಯಶಸ್ವಿಯಾಗಿದ್ದರು. ಪೊಲೀಸ್ ಠಾಣೆಗಳನ್ನು ಕ್ಲೀನ್ ಮಾಡಿದ್ದರು. ಕೊರೊನಾ ಕಾಲದಲ್ಲಿ ಪೊಲೀಸರಿಗೆ ಯೋಗ ಪರಿಚಯಿಸಿದ್ದರು. ಕೊರೊನಾ ವಾರಿಯರ್ ಆಗಿ ಹೆಸರು ಮಾಡಿದ್ದರು. ಇದೀಗ ಪ್ರಧಾನಿ ಮೋದಿ ಅವರ ಸಮೀಪ ನಿಂತು ಭದ್ರತೆ ಒದಗಿಸುವ ಮೂಲಕ ಸುದ್ದಿಯಾಗಿದ್ದಾರೆ.

- Advertisement -

Related news

error: Content is protected !!