Monday, June 15, 2026
spot_imgspot_img
spot_imgspot_img

ಮೈಸೂರು ದಸರಾ ಆಚರಣೆ ಹಿನ್ನಲೆ-ಆನೆಗಳ ಮಾವುತರು, ಕಾವಾಡಿಗರು,ಅರಣ್ಯ ಸಿಬ್ಬಂದಿಗೆ ಕೊರೊನ ಟೆಸ್ಟ್

- Advertisement -
- Advertisement -

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಹಿನ್ನಲೆ, ಗಜಪಡೆ ಕಾಡಿನಿಂದ ಅರಮನೆಗೆ ಬಂದಿವೆ. ಈ ಬಾರಿ ಕೊರೊನ ಸಾಂಕ್ರಾಮಿಕದ ಹಿನ್ನೆಲೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗಿದ್ದು, ಆನೆಗಳ ಮಾವುತರು, ಕಾವಾಡಿಗರು ಹಾಗೂ ಅರಣ್ಯ ಸಿಬ್ಬಂದಿಯನ್ನು ಕೂಡ ಕೊರೊನ ಟೆಸ್ಟ್ ಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಆದರೆ ಕೊರೊನ ಟೆಸ್ಟ್ ಮಾಡಿಸಲು ಮಾವುತರು ಒಪ್ಪಿಗೆ ನೀಡುತ್ತಿಲ್ಲ. ನಾವು ಕಾಡಿನ ಜನ, ಯಾವ ರೋಗವು ಇಲ್ಲ. ನಾವು ಯಾವುದೇ ಟೆಸ್ಟ್ ಮಾಡಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಮಗೆ ಪರೀಕ್ಷೆ ಮಾಡಿಸಿದ್ರೆ ಆನೆಗೂ ಕೊರೊನ ಪರೀಕ್ಷೆ ಮಾಡಿಸಿ ಎಂದು ಡಿಹೆಚ್ಒ ಡಾ. ವೆಂಕಟೇಶ್ ಜೊತೆ ವಾದ ನಡೆಸಿದ್ದಾರೆ. ಸದ್ಯ ಡಿಸಿಎಫ್ ಅಲೆಕ್ಸಾಂಡರ್ ಆಗಮಿಸಿ ಮಾವುತರ ಮಾನವೊಲಿಕೆ ಮಾಡುತ್ತಿದ್ದಾರೆ.

- Advertisement -

Related news

error: Content is protected !!